Asianet Suvarna News Asianet Suvarna News

ಶುರುವಾಗಲಿದೆ ಸರಿಗಮಪ ಸೀಸನ್ 15; ವಾಪಸ್ಸಾಗ್ತಾರಾ ರಾಜೇಶ್ ಕೃಷ್ಣನ್?

ಶುರುವಾಗಲಿದೆ ಸಂಗೀತ ಅಬ್ಬರ | ಸಂಗೀತದ ಮಹಾಪಯಣ, ಶುರುವಾಗ್ತಿದೆ ಹೊಸ ಚರಣ, ಒಟ್ಟಾಗಿದ್ದಾರೆ ದಿಗ್ಗಜರೆಲ್ಲಾ, ಈ ಸಂಭ್ರಮಕ್ಕೆ ಯಾವುದೂ ಸಾಟಿಯಿಲ್ಲ!

SaRiGaMaPa season 15 begins with a promo video
Author
Bengaluru, First Published Sep 28, 2018, 1:48 PM IST
  • Facebook
  • Twitter
  • Whatsapp

ಬೆಂಗಳೂರು (ಸೆ. 28): ಸಂಗೀತ ಪ್ರಿಯರ ನೆಚ್ಚಿನ ಮ್ಯೂಸಿಕಲ್ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ಶುರುವಾಗಿದೆ.  ನಿಮ್ಮ ಸಂಗೀತ ಪ್ರತಿಭೆಯನ್ನು ಅನಾವರಣಗೊಳಿಸಲು ಸದವಕಾಶ ಒದಗಿ ಬಂದಿದೆ. ಸಂಗೀತ ದಿಗ್ಗಜರೆಲ್ಲಾ ಒಂದಾಗಿದ್ದಾರೆ. ಸಂಭ್ರಮದ ವಾತಾವರಣ ಮನೆ ಮಾಡಿದೆ. ಸಂಗೀತ ದೇವಿಯ ಆರಾಧನೆ ಶುರುವಾಗುವುದೊಂದೇ ಬಾಕಿ ಉಳಿದಿದೆ. 

 

ಗಾಯಕರಾದ ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸಂಗೀತ ಮಾಂತ್ರಿಕ ಹಂಸಲೇಖ ಸಾರಥ್ಯ ವಹಿಸಲಿದ್ದಾರೆ. ಕಳೆದ ಸೀಸನ್ ನಲ್ಲಿ ಕಾಣೆಯಾಗಿದ್ದ ರಾಜೇಶ್ ಕೃಷ್ಣನ್ ಈ ಬಾರಿ ಆಗಮಿಸಿದ್ದಾರೆ. ರಾಜೇಶ್ ಕೃಷ್ಣನ್ ಆಗಮನ ಇನ್ನಷ್ಟು ಕಳೆ ತಂದಿದೆ. ಜೀ ಕನ್ನಡ ವಾಹಿನಿ ಈಗಾಗಲೇ ಪ್ರೋಮೋ ಬಿಟ್ಟಿದ್ದು ಸಿಕ್ಕಾಪಟ್ಟೆ ವ್ಯೂ ಆಗಿದೆ. ಪ್ರೋಮೋ ಝಲಕ್ ಇಲ್ಲಿದೆ ನೋಡಿ. 

Follow Us:
Download App:
  • android
  • ios