ಸರಿಗಮ ವಿಜಿ ಈಗ ಡಾಕ್ಟರ್!

ಹಿರಿಯ ನಟ ಸರಿಗಮವಿಜಿ ಅವರಿಗೆ ಡಾಕ್ಟರೇಟ್ ಪ್ರಧಾನ | ಮೂರು ದಶಕಕ್ಕೂ ಹೆಚ್ಚು ಕಾಲ ರಂಗಭೂಮಿ, ಸಿನಿಮಾ ರಂಗದಲ್ಲಿ ಸೇವೆ | 

Sarigama Viji bagged doctorate award

ಬೆಂಗಳೂರು (ಸೆ. 26):  ಹಿರಿಯ ನಟ ಸರಿಗಮವಿಜಿ ಅವರಿಗೆ ಡಾಕ್ಟರೇಟ್ ಪ್ರಧಾನ ಮಾಡಿ ಗೌರವಿಸಲಾಗಿದೆ. ಇವರ 38 ವರ್ಷದ ಕಲಾಸೇವೆಯನ್ನು ಗುರುತಿಸಿದ ನ್ಯಾಷನಲ್ ವರ್ಚುಯಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಡ್ಯುಕೇಶನ್ ಸಂಸ್ಥೆಯು ಡಾಕ್ಟರೇಟ್ ಗೌರವವನ್ನು ನೀಡಿ ಗೌರವಿಸಿದೆ.

ಮೂರು ದಶಕಕ್ಕೂ ಹೆಚ್ಚು ಕಾಲ ರಂಗಭೂಮಿ, ಸಿನಿಮಾರಂಗದಲ್ಲಿ ತೊಡಗಿಕೊಂಡಿರುವ ಸರಗಮವಿಜಿ ಅವರ ಸಂಸಾರದಲ್ಲಿ ಸರಿಗಮ ಹಾಸ್ಯ ನಾಟಕ ರಾಜ್ಯ, ಅಲ್ಲದೆ ವಿದೇಶಗಳಲ್ಲೂ 1,397 ಪ್ರದರ್ಶನ ಕಂಡಿದೆ. 1980 ರಲ್ಲಿ ಗೀತಪ್ರಿಯಾ ನಿರ್ದೇಶನದ ‘ಬೆಳವಳದ ಮಡಿಲಲ್ಲಿ’ ಚಿತ್ರಕ್ಕೆ ಸಣ್ಣ ಪಾತ್ರದಲ್ಲಿ ಅಭಿನುಸುವುದರ ಮೂಲಕ ನಟನಾಗಿ ಗುರುತಿಸಿಕೊಂಡರು.

ನಂತರ ಸರ್ಕಾರಿ ಸ್ವಾಮ್ಯದ ಎನ್‌ಜಿಇಎಫ್ ಸಂಸ್ಥೆಯಲ್ಲಿ ನೌಕರಿ. ಬಣ್ಣದ ಹುಚ್ಚು ಬಿಡಲಾಗದೆ, ಸರ್ಕಾರಿ ಕೆಲಸಕ್ಕೆ ಬೆನ್ನು ತೋರಿಸಿ ಪೂರ್ಣಪ್ರಮಾಣದಲ್ಲಿ ಚಿತ್ರರಂಗದಲ್ಲಿ ತೊಡಗಿಕೊಂಡವರು. ಅದರ ಫಲವೇ 269 ಚಿತ್ರಗಳಲ್ಲಿ ನಟನೆ, 80 ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿದ್ದಾರೆ.

2,400 ಧಾರಾವಾಹಿಗಳ ನಿರ್ದೇಶನದ ಜತೆಗೆ ನಟನೆ ಮಾಡಿದ್ದಾರೆ. ವಿಶೇಷ ಅಂದರೆ ಇವರ ನಟನೆಯ ಚಿತ್ರಗಳ ಪಟ್ಟಿಯಲ್ಲಿ ಟೈಗರ್‌ಪ್ರಭಾಕರ್  ಚಿತ್ರಗಳೇ ಹೆಚ್ಚಾಗಿದೆ.

Latest Videos
Follow Us:
Download App:
  • android
  • ios