ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಚಿತ್ರೀಕರಿಸಲು ಚಿತ್ರತಂಡ ಬ್ಯಾಂಕಾಕ್ ಗೆ ತೆರಳಿತ್ತು. ಅಲ್ಲಿ ಒಂದು ಆಕ್ಷನ್ ದೃಶ್ಯವನ್ನು ಚಿತ್ರೀಕರಿಸಲಾಯಿತು. ಈ ಚಿತ್ರೀಕರಣದಲ್ಲಿ ಕಾರ್ತಿ, ಮಾಳವಿಕಾ ಮೋಹನನ್ ಸೇರಿದಂತೆ ಚಿತ್ರತಂಡದವರು ಭಾಗವಹಿಸಿದ್ದರು. ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ಮುಗಿಸಿದ 

ಸರ್ದಾರ್ ೨ ಶೂಟಿಂಗ್ ಮುಗೀತು : ಮೈಯ್ಯಳಗನ್ ಚಿತ್ರದ ಯಶಸ್ಸಿನ ನಂತರ ನಟ ಕಾರ್ತಿ ಅಭಿನಯದಲ್ಲಿ ಭರ್ಜರಿಯಾಗಿ ತಯಾರಾಗುತ್ತಿರುವ ಚಿತ್ರ ಸರ್ದಾರ್ 2. ಈ ಚಿತ್ರವನ್ನು ಪಿ.ಎಸ್.ಮಿತ್ರನ್ ನಿರ್ದೇಶಿಸಿದ್ದಾರೆ. ಇದರ ಮೊದಲ ಭಾಗ 2022 ರ ದೀಪಾವಳಿಗೆ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು ಮತ್ತು ಬಾಕ್ಸ್ ಆಫೀಸ್ ನಲ್ಲಿ ೧೦೦ ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು. ಆ ಚಿತ್ರದ ಯಶಸ್ಸಿನ ನಂತರ, ಅದರ ಎರಡನೇ ಭಾಗವನ್ನು ಘೋಷಿಸಲಾಯಿತು ಮತ್ತು ಅದರ ಚಿತ್ರೀಕರಣ ಕಳೆದ ವರ್ಷ ಆರಂಭವಾಯಿತು.

ಪ್ರಿನ್ಸ್ ಪಿಕ್ಚರ್ಸ್ ಸಂಸ್ಥೆಯೇ ಸರ್ದಾರ್ 2 ಚಿತ್ರವನ್ನು ನಿರ್ಮಿಸಿದೆ. ಈ ಚಿತ್ರದಲ್ಲಿ ನಟ ಕಾರ್ತಿ ಜೊತೆಗೆ ಮಾಳವಿಕಾ ಮೋಹನನ್, ರೆಜಿಶಾ ವಿಜಯನ್, ಆಶಿಕಾ ರಂಗನಾಥ್ ಮುಂತಾದ ದೊಡ್ಡ ತಾರಾಗಣವೇ ನಟಿಸಿದೆ. ಈ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಬೇಕಿತ್ತು. ಆದರೆ ಅವರು ಮಧ್ಯದಲ್ಲಿ ಹೊರನಡೆದ ಕಾರಣ ಅವರ ಬದಲಿಗೆ ಸ್ಯಾಮ್ ಸಿ.ಎಸ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸರ್ದಾರ್ 2 ಚಿತ್ರದ ಚಿತ್ರೀಕರಣವು ಭರದಿಂದ ಸಾಗುತ್ತಿತ್ತು.

ಸರ್ದಾರ್ ೨ ಶೂಟಿಂಗ್ ಮುಕ್ತಾಯ

ಈ ನಡುವೆ, ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಚಿತ್ರೀಕರಿಸಲು ಚಿತ್ರತಂಡ ಬ್ಯಾಂಕಾಕ್ ಗೆ ತೆರಳಿತ್ತು. ಅಲ್ಲಿ ಒಂದು ಆಕ್ಷನ್ ದೃಶ್ಯವನ್ನು ಚಿತ್ರೀಕರಿಸಲಾಯಿತು. ಈ ಚಿತ್ರೀಕರಣದಲ್ಲಿ ಕಾರ್ತಿ, ಮಾಳವಿಕಾ ಮೋಹನನ್ ಸೇರಿದಂತೆ ಚಿತ್ರತಂಡದವರು ಭಾಗವಹಿಸಿದ್ದರು. ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ಮುಗಿಸಿದ ಸರ್ದಾರ್ 2 ಚಿತ್ರತಂಡ, ಅಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಅಲ್ಲಿನ ಹುವಾಹಿನ್ ವಿಮಾನ ನಿಲ್ದಾಣದ ಹೊರಗೆ ಚಿತ್ರತಂಡ ಕೇಕ್ ಕತ್ತರಿಸಿ ಸಂಭ್ರಮಿಸಿದ ಫೋಟೋಗಳು ಬಿಡುಗಡೆಯಾಗಿ ವೈರಲ್ ಆಗಿವೆ.

ಸರ್ದಾರ್ ೨ ಯಾವಾಗ ರಿಲೀಸ್?

ಸರ್ದಾರ್ 2 ಚಿತ್ರ ಈ ವರ್ಷ ದೀಪಾವಳಿಗೆ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಆದರೆ ಆ ಸಮಯದಲ್ಲಿ ಸೂರ್ಯ ಅವರ 45 ನೇ ಚಿತ್ರ ಕೂಡ ಬಿಡುಗಡೆಯಾಗುವುದರಿಂದ, ದೀಪಾವಳಿ ರೇಸ್ ನಿಂದ ಹೊರಬಿದ್ದಿದೆ ಸರ್ದಾರ್ 2. ಇದರ ನಂತರ 2026 ರ ಸಂಕ್ರಾಂತಿಗೆ ಆ ಚಿತ್ರ ತೆರೆಗೆ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಸಂಕ್ರಾಂತಿಗೆ ವಿಜಯ್ ಅವರ ಜನನಾಯಕ ಚಿತ್ರ ಬಿಡುಗಡೆಯಾಗುವುದರಿಂದ, ಅದರ ಜೊತೆ ಸ್ಪರ್ಧಿಸಲು ಸಾಧ್ಯವಾಗದ ಕಾರಣ, ಸರ್ದಾರ್ 2ಚಿತ್ರವನ್ನು ಈ ವರ್ಷ ಡಿಸೆಂಬರ್ ತಿಂಗಳ ಕ್ರಿಸ್ ಮಸ್ ರಜೆಯಲ್ಲಿ ತೆರೆಗೆ ತರಲು ಯೋಜಿಸಿದ್ದಾರಂತೆ.