ನೇರ ಮಾತು, ಬೋಲ್ಡ್ ಕ್ಯಾರಕ್ಟೆರ್‌ನಿಂದ ಸೈಫ್ ಮೊದಲ ಪತ್ನಿ ಮಗಳು ಸಾರಾ ಆಲಿಖಾನ್ ಫೇಮಸ್ ಆಗುತ್ತಿದ್ದಾರೆ. 'ಕೇದರನಾಥ್' ಚಿತ್ರದ ಪ್ರಮೋಷನ್‌ಗಾಗಿ ನಟ ಸುಶಾಂತ್‌ರೊಂದಿಗೆ ಸುತ್ತುತ್ತಿರುವ ಸಾರಾ ಬಗ್ಗೆ ಬಿ ಟೌನ್‌ನಲ್ಲಿ ಗುಸು ಗುಸು ಸುದ್ದಿ ಹರಡುತ್ತಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಲೇ ತನ್ನ ಎಕ್ಸ್ ಬಾಯ್‌ ಫ್ರೆಂಡ್ ಬಗ್ಗೆಯೂ ಬಾಯಿ ಬಿಟ್ಟಿದ್ದು, ಮತ್ತೊಂದು ಸೀಕ್ರೆಟ್ ವಿಚಾರ ಸಾರಾ ಹಂಚಿಕೊಂಡಿದ್ದಾರೆ.

ಹೌದು, ಕೇಂದ್ರದ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗೆ ವೀರ್ ಪಹಾರಿಯಾರೊಂದಿಗೆ ಡೇಟಿಂಗ್ ನಡೆಸುತ್ತಿದ್ದೆ ಎಂಬ ಸತ್ಯವನ್ನು ಬಾಯಿ ಬಿಟ್ಟಿದ್ದಾರೆ. ಸದಾ ‘ಅವನು ನನ್ನ ಮನಸ್ಸು ಮುರಿದಿಲ್ಲ. ಎಲ್ಲವೂ ಸರಿಯಾಗಿಯೇ ಇದೆ. ನನ್ನನ್ನು ನಂಬಿ...’ ಎಂದು ಗೋಗರೆಯುತ್ತಿದ್ದ ಬೆಡಗಿ ಇದೀಗ ತನ್ನ ಎಕ್ಸ್ ಬಗ್ಗೆ ಓಪನ್ ಆಗಿಯೇ ಹೇಳಿಕೊಂಡಿದ್ದಾಳೆ.

96 ಕೆಜಿ ತೂಗುತ್ತಿದ್ದ ಹುಡುಗಿ ಬಳುಕುವ ಬಳ್ಳಿಯಾದದ್ದು ಹೇಗೆ?

ವೀರ್ ಜತೆ 2016ರಲ್ಲಿ ಸಿಕ್ಕಾಪಟ್ಟೆ ಡೇಟಿಂಗ್ ಮಾಡಿದ್ದರೂ, ಸಾರಾ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಒಂದು ವರ್ಷದಲ್ಲಿಯೇ ಎಲ್ಲವೂ ಮುಗಿದಿತ್ತು. ಇದೀಗ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ, ‘ನಾನು ಡೇಟ್ ಮಾಡಿದ್ದು ಅವನೊಬ್ಬನ ಜತೆ ಮಾತ್ರ. ಈಗ ನನಗೆ ಯಾವ ಬಾಯ್ ಫ್ರೆಂಡೂ ಇಲ್ಲ. ನಾನೀಗ ಸಿಂಗಲ್....' ಎಂದು ಹೇಳಿದ್ದಾರೆ.

ಎಲ್ಲವೂ ಒಂದು ಹಂತಕ್ಕೆ ಬಂದಿದೆ ಎನ್ನುವಷ್ಟರಲ್ಲಿ ಸಾರಾ ಬಿ-ಟೌನ್‌ಗೆ ಎಂಟ್ರಿ ಕೊಟ್ಟಿದ್ದು, ಕೇದರನಾಥ್ ಹಾಗೂ ಸಿಂಬಾ ಚಿತ್ರಗಳಲ್ಲಿ ನಟಿಸಿದ್ದಾರೆ. ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು, ಸಾರಾಗೆ ಒಳ್ಳೆ ಹೆಸರು ತಂದು ಕೊಟ್ಟಿದೆ.

ಸುಶಾಂತ್ ಜೊತೆ ಸೈಫ್ ಮಗಳ ಡೇಟಿಂಗ್?