ಸೈಫ್ ಅಲಿ ಖಾನ್ ಮಾಜಿ ಪತ್ನಿ ಅಮೃತಾ ಸಿಂಗ್ ಹಾಗೂ ಮಗಳು ಸಾರಾ ಅಲಿ ಖಾನ್ ಕೂಲ್ ಲೈಫ್ ಲೀಡ್ ಮಾಡುತ್ತಿದ್ದಾರೆ. ಆದರೆ, ಇದೀಗ ಕೋಟ್ಯಾಂತರ ರೂ. ಬೆಲೆ ಬಾಳುವ ಬಂಗಲೆ ಮೇಲೆ ಕಣ್ಣಾಕ್ಕಿದ್ದಕ್ಕೆ ಸುದ್ದಿಯಾಗುತ್ತಿದ್ದಾರೆ.

 

ಇತ್ತೀಚೆಗೆ ಬಿಡುಗಡೆಯಾದ 'ಕೇದಾರನಾಥ್' ಹಾಗೂ 'ಸಿಂಬಾ' ಬಾಕ್ಸ್ ಆಫೀಸ್ ಕೊಳ್ಳೆ ಹೊಡಿದಿರುವ ಸಂತಸದಲ್ಲಿದ ಸಾರಾ ಎಲ್ಲೆಡೆ ಸಂದರ್ಶನ ನೀಡುತ್ತಾ, ಸೋಷಿಯಲ್ ಮಿಡಿಯಾದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಈ ನಡುವೆಯೇ ಇದೀಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ.

96 ಕೆಜಿ ತೂಗುತ್ತಿದ್ದ ಹುಡುಗಿ ಬಳುಕುವ ಬಳ್ಳಿಯಾದದ್ದು ಹೇಗೆ?

ಅಮೃತಾ ಸಿಂಗ್ ಸಂಬಂಧಿ ಮಧುಸೂದನ್ ಅವರಿಗೆ ಸೇರಿದ ಕೋಟ್ಯಾಂತರ ಬೆಲೆ ಬಾಳುವ ಬಂಗಲೆಯೊಂದು ಡೆಹರಾಡೂನ್‌ನಲ್ಲಿದೆ. ಜನವರಿಯಲ್ಲಿ ಈ ಬಂಗಲೆ ಮಾಲೀಕ ಮಧುಸೂಧನ್ ವಿಧಿವಶರಾಗಿದ್ದು, ಇದೀಗ ಈ ಬೆಲೆ ಬಾಳುವ ಬಂಗಲೆ ಮೇಲೆ ಹಕ್ಕು ಸಾಧಿಸಲು ಅಮ್ಮ-ಮಗಳು ಯತ್ನಿಸುತ್ತಿರುವುದು ಇದೀಗ ಸುದ್ದಿಯಾಗಿದೆ.

 

ಮಧುಸೂಧನ್ ಅವರು ಅನಾರೋಗ್ಯ ಪೀಡಿತರಾಗಿ, ಹಾಸಿಗೆ ಹಿಡಿದಾಗ ಒಂದು ದಿನವೂ ನೋಡಲು ಬಾರದ ಅಮೃತಾ ಸಿಂಗ್, ಇದೀಗ ಆಸ್ತಿ ಮೇಲೆ ಹಕ್ಕು ಸ್ಥಾಪಿಸಲು ಹೆಣಗುತ್ತಿದ್ದಾರೆಂದು ಮಧು ಅವರ ಕೇರ್ ಟೇಕರ್ ಖುಷಿರಾಮ್ ಆರೋಪಿಸುತ್ತಿದ್ದಾರೆ. ಅಮ್ಮ-ಮಗಳ ಮೇಲೆ ದೂರೂ ದಾಖಲಿಸಿದ್ದಾರೆ. ನೋಡಬೇಕು ಈ ಪ್ರಕರಣ ಅದೆಲ್ಲಿಗೆ ಬಂದು ನಿಲ್ಲುತ್ತೆ ಅಂತ.....