ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಾಯೇಶಾ ಅಭಿನಯದ ಸಂತೋಷ್ ಆನಂದ್ ರಾಮ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಯುವರತ್ನ’ಕ್ಕೆ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಆಡಿಷನ್ ಬಗ್ಗೆ ಹರಿದಾಡುತ್ತಿದ್ದ ಸುದ್ಧಿಗೆ ಸ್ಪಷ್ಟನೆ ನೀಡಿದ್ದಾರೆ.

‘ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾಗಾಗಿ ಹುಬ್ಬಳ್ಳಿ- ಧಾರವಾಡ ಸ್ಥಳೀಯ ಪುರುಷ ಹಾಗೂ ಮಹಿಳಾ ಕಲಾವಿದರು ಸ್ಟೂಡೆಂಟ್ ಪಾತ್ರಕ್ಕೆ ಬೇಕಾಗಿದ್ದಾರೆ. ವಯಸ್ಸು 18 ರಿಂದ 28 ’ ಎಂದು ಸಂಪರ್ಕ ಮಾಡಬೇಕಾದ ವ್ಯಕ್ತಿಯ ಹೆಸರು ಹಾಗೂ ದೂರವಾಣಿ ಸಂಖೆಯನ್ನು ಫೋಟೋದ ರೀತಿಯಲ್ಲಿ ಅಪ್ಲೋಡ್ ಮಾಡಿಲಾಗಿತ್ತು. ಇದು ಚಿತ್ರ ನಿರ್ದೇಶಕರಾದ ಸಂತೋಷ ಆನಂದ್ ರಾಮ್ ಗಮನಕ್ಕೆ ಬಂದಿದೆ.

ಸಂತೋಷ ಆನಂದ್ ರಾಮ್ ತಮ್ಮ ಟ್ಟೀಟರ್ ಖಾತೆಯಲ್ಲಿ ‘ಹುಬ್ಬಳಿ ಹಾಗೂ ಧಾರವಾಡದ ಜನರೇ, ಇದನ್ನು ನಂಬಬೇಡಿ ಇವರು ನಮ್ಮ ಚಿತ್ರತಂಡಕ್ಕೆ ಸಂಬಂಧಪಟ್ಟ ವ್ಯಕ್ತಿಯಲ್ಲ. ಇದು ಫೇಕ್ ಸುದ್ಧಿ. ಈಗಾಗಲೇ ಯುವರತ್ನ ಚಿತ್ರದ ಆಡಿಷನ್ ಮುಗಿದಿದೆ’ ಎಂದು ಬರೆದುಕೊಂಡಿದ್ದಾರೆ.