‘‘ಪ್ರತಿ ಬಾರಿ ನಾನು ಒಲ್ಲೆ ಎಂದಾಗ ಅಶ್ಲೀಲತೆಗೆ ಅವಕಾಶವಿಲ್ಲದಂತೆ ಚಿತ್ರಿಸುವ ಭರವಸೆ ನೀಡುತ್ತಿದ್ದರು’’- ಸಾನಿಯಾ ಮಿರ್ಜಾ
ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ ಕೆಲವು ಚಿತ್ರಗಳಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಬೇಕೆಂದು ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾಳನ್ನು ಒತ್ತಾಯಿಸಿದ್ದರಂತೆ!
ಸಾಜಿದ್ ಖಾನ್ ಹಾಗೂ ರಿತೇಶ್ ದೇಶ್'ಮುಖ್ ಜತೆಯಾಗಿ ನಡೆಸಿಕೊಡುವ ಯಾದೋಂಕಿ ಬಾರಾತ್ ಕಾರ್ಯಕ್ರಮದ ವೇಳೆ ಕೇಳಿದ ಪ್ರಶ್ನೆಗೆ ಸಾನಿಯಾ ಈ ರೀತಿ ಉತ್ತರಿಸಿದ್ದಾರೆ.
ಸ್ವತಃ ಸಾಜಿದ್ ಅವರೇ ನಡೆಸಿಕೊಡುವ ಯಾದೋಂಕಿ ಬಾರಾತ್ ಶೋಗೆ ಅತಿಥಿಯಾಗಿ ಆಗಮಿಸಿದ್ದ ಸಾನಿಯಾ, 'ತಮ್ಮನ್ನು ಈ ಹಿಂದೆ ಸಾಜಿದ್ ‘ಹೇ ಬೇಬಿ’, ‘ಹೌಸ್ ಫುಲ್’, ‘ಹೌಸ್‌ಫುಲ್ 2’, ‘ಹಿಮ್ಮತ್ ವಾಲಾ’ ಮುಂತಾದ ಚಿತ್ರಗಳಲ್ಲಿ ಈ ಆಫರ್ ನೀಡಿದ್ದರು' ಎಂದಿದ್ದಾರೆ.
‘‘ಪ್ರತಿ ಬಾರಿ ನಾನು ಒಲ್ಲೆ ಎಂದಾಗ ಅಶ್ಲೀಲತೆಗೆ ಅವಕಾಶವಿಲ್ಲದಂತೆ ಚಿತ್ರಿಸುವ ಭರವಸೆ ನೀಡುತ್ತಿದ್ದರು’’ ಎಂದು ಸಾನಿಯಾ ಹೇಳಿಕೊಂಡಿದ್ದಾರೆ.
