ಎನ್‌ಟಿಆರ್ ಅವರ ಎರಡನೇ ಪತ್ನಿ ಲಕ್ಷ್ಮೀಪಾರ್ವತಿ ಪಾತ್ರಕ್ಕೆ ಯಜ್ಞಾ ಬಣ್ಣ ಹಚ್ಚಿದ್ದಾರೆ. ಆ ಮೂಲಕ ಬಹುದೊಡ್ಡ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.

ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಎನ್‌ಟಿಆರ್ ಮತ್ತು ಅವರ ಎರಡನೇ ಪತ್ನಿ ಲಕ್ಷ್ಮೀಪಾರ್ವತಿ ಕುರಿತ ಚಿತ್ರವಿದು ಎನ್ನಲಾಗಿದೆ. ಸಾಮಾನ್ಯವಾಗಿ ವಿವಾದಗಳನ್ನೇ ಬೆನ್ನು ಹತ್ತಿ ಹೋಗುವ ಆರ್‌ಜಿವಿಗೆ ಸಿಕ್ಕಿದ್ದು ಮತ್ತೊಂದು ವಿವಾದಿತ ಕಥಾವಸ್ತುವೇ ಎನ್ನುತ್ತಿದೆ ಟಾಲಿವುಡ್. ಹಾಗಾಗಿ ರಾಜಕಾರಣಿಯೂ ಆಗಿದ್ದ ಸೂಪರ್‌ಸ್ಟಾರ್ ಎನ್‌ಟಿ ರಾಮ್ ರಾವ್ ಅವರ ಬದುಕಲ್ಲಿ ಲಕ್ಷ್ಮೀಪಾರ್ವತಿ ವಹಿಸಿದ ಪಾತ್ರದ ಕುರಿತೇ ವರ್ಮ ಸಿನಿಮಾ ಮಾಡಿದ್ದಾರೆ ಎನ್ನಲಾಗಿದೆ. 

ಎದ್ದೇಳು ಮಂಜುನಾಥ’, ‘ಉಳಿದವರು ಕಂಡಂತೆ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ನಟಿ ಎನಿಸಿಕೊಂಡ ಯಜ್ಞಾ ಶೆಟ್ಟಿ ಈ ಹಿಂದೆ ರಾಮ್‌ಗೋಪಾಲ್ ವರ್ಮ ನಿರ್ದೇಶಿಸಿದ್ದ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರದಲ್ಲಿ ಮುತ್ತುಲಕ್ಷ್ಮಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಅದೇ ಪರಿಚಯದೊಂದಿಗೆ ಟಾಲಿವುಡ್‌ಗೂ ಹೋಗಿ, ವರ್ಮ ನಿರ್ದೇಶನದ ‘ಲಕ್ಷ್ಮೀಸ್ ಎನ್‌ಟಿಆರ್ ’ ಸಿನಿಮಾದಲ್ಲಿ ಲಕ್ಷ್ಮೀಪಾರ್ವತಿ ಆಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ನಾನೇ ಲಕ್ಷ್ಮೀ ಪಾರ್ವತಿ. ಆರ್‌ಜಿವಿ ಅವರ ಪರಿಚಯವಿತ್ತು. ಹೊಸದೊಂದು ಸಿನಿಮಾದಲ್ಲಿ ಅಭಿನಯಿಸುತ್ತೀರಾ ಅಂತ ಕೇಳಿದರು. ಓಕೆ ಅಂದೆ. ಹಾಗಾಗಿ ಈ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. - ಯಜ್ಞಾ ಶೆಟ್ಟಿ

ಸದ್ಯಕ್ಕವರು ಆ ಪಾತ್ರದ ಬಗ್ಗೆ ಮಾತನಾಡಲು ನಿರಾಕರಿಸುತ್ತಾರೆ. ‘ಹೌದು, ಚಿತ್ರದಲ್ಲಿ ನಾನೇ ಲಕ್ಷ್ಮೀಪಾರ್ವತಿ. ಆರ್‌ಜಿವಿ ಅವರ ಪರಿಚಯವಿತ್ತು. ಹೊಸದೊಂದು ಸಿನಿಮಾದಲ್ಲಿ ಅಭಿನಯಿಸುತ್ತೀರಾ ಅಂತ ಕೇಳಿದರು. ಓಕೆ ಅಂದೆ. ಹಾಗಾಗಿ ಆ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಪಾತ್ರದ ವಿವರದ ಬಗ್ಗೆ ನಾನು ಮಾತನಾಡುವಂತಿಲ್ಲ. ಮುಂದಿನ ದಿನಗಳಲ್ಲಿ ಚಿತ್ರತಂಡವೇ ಆ ಬಗ್ಗೆ ಮಾಹಿತಿ ನೀಡಲಿದೆ’ ಎಂದಷ್ಟೇ ಹೇಳುತ್ತಾರೆ ಯಜ್ಞಾ ಶೆಟ್ಟಿ.

ಯಜ್ಞಾ ಶೆಟ್ಟಿ ಈಗ ಎನ್‌ಟಿಆರ್ ಪತ್ನಿ!

ಮತ್ತೆ ವರ್ಮಾ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸಿದ್ದಕ್ಕೆ ಅವರಿಗೆ ಖುಷಿಯಿದೆ. ಹಾಗಾಗಿ ವರ್ಮಾ ಅವರ ಸಿನಿಮಾ ಮೇಕಿಂಗ್ ಶೈಲಿಯನ್ನು ಮೆಚ್ಚಿಕೊಂಡು ಮಾತನಾಡುತ್ತಾರೆ. ‘ರಾಮ್ ಗೋಪಾಲ್ ವರ್ಮಾ ಅವರ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಅವರ ಸಿನಿಮಾ ಮೇಕಿಂಗ್ ಶೈಲಿ ಎಲ್ಲರಿಗೂ ಗೊತ್ತಿದೆ. ಮೊದಲೇ ನನಗೆ ಪರಿಚಯ ಇದ್ದ ಕಾರಣ, ಈ ಸಿನಿಮಾದಲ್ಲಿ ಅಭಿನಯಿಸುವುದು ಕಷ್ಟವೇನು ಆಗಲಿಲ್ಲ. ಆ ಪಾತ್ರಕ್ಕೆ ಅವರೇನು ನಿರೀಕ್ಷೆ ಮಾಡಿದ್ದರೋ ಅಷ್ಟನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ ಎನ್ನುವ ಖುಷಿಯಿದೆ’ ಎನ್ನುತ್ತಾರೆ ಯಜ್ಞಾ ಶೆಟ್ಟಿ.