Asianet Suvarna News Asianet Suvarna News

3 ತಿಂಗಳು ತರಬೇತಿ ಪಡೆದರೂ ಬಾಕ್ಸರ್ ಪಟ್ಟಿಯಲ್ಲಿ ರಾಜ್‌ ಮೊಮ್ಮಗನಿಗೆ 'ಟೆನ್' ಸ್ಥಾನ!

ಕಿಚ್ಚ ಸುದೀಪ್‌ ಅಭಿನಯದ ‘ಪೈಲ್ವಾನ್‌’ ಬೆನ್ನಲೇ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸ್ಪೋಟ್ಸ್‌ರ್‍ ಆಧರಿತ ಸಿನಿಮಾ ದೊಡ್ಡ ಸದ್ದು ಮಾಡುತ್ತಿದೆ. ವಿನಯ್‌ ರಾಜ್‌ಕುಮಾರ್‌ ಬಾಕ್ಸರ್‌ ಆಗಿ ಅಖಾಡಕ್ಕಿಳಿಯುತ್ತಿದ್ದು, ಇದೀಗ ಆ ಚಿತ್ರಕ್ಕೆ ಟೈಟಲ್‌ ಫೈನಲ್‌ ಆಗಿದೆ. ‘ಟೆನ್‌’ ಎಂದು ನಾಮಕರಣ ಮಾಡಲಾಗಿದೆ.

Sandalwood Vinay Rajkumar signs project as boxer in ten film
Author
Bangalore, First Published Sep 17, 2019, 10:16 AM IST

ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಕರಮ್‌ ಚಾವ್ಲಾ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರವಿದು. ಆಶಿಕಾ ರಂಗನಾಥ್‌ ಜೋಡಿ.

ಕತೆಗೆ ಪೂರಕವಾದ ಟೈಟಲ್‌: ಪುಷ್ಕರ್‌

ಚಿತ್ರಕ್ಕೆ ಟೆನ್‌ ಎನ್ನುವ ಟೈಟಲ್‌ ಅನ್ನೇ ಚಿತ್ರ ತಂಡ ಆಯ್ಕೆ ಮಾಡಿದ್ದಕ್ಕೆ ಕಾರಣ ಚಿತ್ರದ ಕತೆ. ಇದು ಸಂಪೂರ್ಣವಾಗಿ ಬಾಕ್ಸಿಂಗ್‌ ಸುತ್ತಲೇ ಸುತ್ತುವ ಚಿತ್ರ. ಬಾಕ್ಸಿಂಗ್‌ ಅಂತ ಬಂದಾಗ ಇಲ್ಲಿ ಟೆನ್‌ಗೆ ಅದರದ್ದೇಯಾದ ಮಹತ್ವವಿದೆ.

ರಾಜ್ ಮೊಮ್ಮಗನ ಜೊತೆ ’ಬಾಕ್ಸರ್’ ಹೊಡೆದ ಆಶಿಕಾ ರಂಗನಾಥ್ ಅಕ್ಕ!

‘ಬಾಕ್ಸಿಂಗ್‌ನಲ್ಲಿ ಎದುರಾಳಿ ನೆಲಕ್ಕೆ ಬಿದ್ದಾಗ ರೆಫ್ರಿ 10ವರೆಗೂ ಕೌಂಟ್‌ ಮಾಡುತ್ತಾರೆ. ಅಷ್ಟರೊಳಗೆ ಬಿದ್ದ ಬಾಕ್ಸರ್‌ ಎದ್ದು ಕಾದಾಡಲು ಸಜ್ಜಾಗಬೇಕು. ಇನ್ನು ಬಾಕ್ಸಿಂಗ್‌ನಲ್ಲಿ ಸಾಮಾನ್ಯವಾಗಿ ಟೆನ್‌ ರೌಂಡ್ಸ್‌ ಫಿಕ್ಸ್‌ ಆಗಿರುತ್ತೆ. ಇದೆಲ್ಲವೂ ಚಿತ್ರದ ಕತೆಯಲ್ಲಿದೆ. ಹಾಗಾಗಿಯೇ ಚಿತ್ರಕ್ಕೆ ಈ ಟೈಟಲ್‌ ಸೂಕ್ತ ಎನ್ನುವ ಅಭಿಪ್ರಾಯ ನಮ್ಮದಾಗಿದೆ’ ಎನ್ನುತ್ತಾರೆ ಪುಷ್ಕರ್‌ ಮಲ್ಲಿಕಾರ್ಜುನಯ್ಯ.

ಮೂರು ತಿಂಗಳಿಂದ ವಿನಯ್‌ ಬಾಕ್ಸಿಂಗ್‌ ತರಬೇತಿ

'ಕೇಸರಿ' ಧರಿಸಿದ ರಾಜ್‌ಕುಮಾರ್ ಮೊಮ್ಮಗ ?

ವಿನಯ್‌ ರಾಜ್‌ಕುಮಾರ್‌ ಮೂರು ತಿಂಗಳಿಂದ ಬಾಕ್ಸಿಂಗ್‌ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಅವರ ತರಬೇತಿ ಶೈಲಿ ನೋಡಿದವರೆಲ್ಲ ರಿಯಲ್‌ ಲೈಫ್‌ನಲ್ಲೇ ಬಾಕ್ಸರ್‌ ಆಗಿ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದರೆ, ಗೆಲ್ಲುವುದು ಗ್ಯಾರಂಟಿ ಎನ್ನುತ್ತಿದ್ದಾರಂತೆ.

 

Follow Us:
Download App:
  • android
  • ios