ಸುಭಾಷ್ ಚಂದ್ರ ಬೋಸ್ ಪಾತ್ರದಲ್ಲಿ ಶಶಿಕುಮಾರ್

https://static.asianetnews.com/images/authors/b348a094-0bef-5801-a1f6-61e57071185f.jpg
First Published 11, Oct 2018, 1:14 PM IST
Sandalwood versatile actor Shashikumar to enact as Subhas Chandra Bose
Highlights

ನಟ ಶಶಿಕುಮಾರ್ ಮತ್ತೆ ಬಣ್ಣದ ಲೋಕದಲ್ಲಿ ಬ್ಯುಸಿ ಆಗುತ್ತಿದ್ದಾರೆ. ವಿಶೇಷ ಅಂದ್ರೆ, ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಭೋಸ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಶಶಿಕುಮಾರ್

ಆ ಚಿತ್ರದ ಹೆಸರು ಲಾಕ್. ಪರುಶುರಾಮ್ ನಿರ್ದೇಶಿಸುತ್ತಿರುವ ‘ಲಾಕ್’ ಸುಭಾಷ್‌ಚಂದ್ರ ಬೋಸ್ ಬದುಕಿನ ಕುರಿತ ಚಿತ್ರ. ಸುಭಾಷ್‌ಚಂದ್ರ ಬೋಸ್ ವಿಚಾರಗಳನ್ನೇ ಪ್ರಧಾನವಾಗಿ ಇಟ್ಟುಕೊಂಡು ಸಿನಿಮಾ ಮಾಡಲಿದ್ದಾರೆ ನಿರ್ದೇಶಕ ಪರುಶುರಾಮ್. ‘ಸುಭಾಷ್‌ಚಂದ್ರ ಬೋಸ್ ಯುವಜನರ ಐಕಾನ್.
ಅವರ ಪಾತ್ರಕ್ಕೆ ಶಶಿಕುಮಾರ್ ಬಣ್ಣ ಹಚ್ಚುತ್ತಿದ್ದಾರೆ. ಪಾತ್ರದ ಬಗ್ಗೆ ಹೇಳಿದಾಗ ಅವರು ಮರು ಮಾತನಾಡದೆ ಒಪ್ಪಿಕೊಂಡರು. ಚಿತ್ರೀಕರಣದಲ್ಲಿ ಅವರು ನೀಡಿದ ಸಹಕಾರ ಅದ್ಭುತವಾಗಿತ್ತು’ ಎನ್ನುತ್ತಾರೆ ನಿರ್ದೇಶಕ ಪರುಶುರಾಮ್. ಅಶ್ವತ್ಥ್ ಕುಮಾರ್ ನಿರ್ಮಾಣದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಶರತ್ ಲೋಹಿತಾಶ್ವ, ಎಂ.ಕೆ. ಮಠ ಅಭಿನಯಿಸಿದ್ದಾರೆ.

 

 

 

loader