ವರುಣರಾಯ ಮುನಿಸಿಕೊಂಡಿದ್ದಾನೆ. ರಾಜ್ಯದ ಬೇರೆ ಬೇರೆ ಕಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಪ್ರವಾಹ ಉಂಟಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಪ್ರವಾಹ, ನೀರಿನಲ್ಲಿ ಸಿಲುಕಿಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ.

ಕರ್ನಾಟಕ ಪ್ರವಾಹ: ಸಾಕು ನಿಲ್ಲಿಸು ನಿನ್ನ ಪ್ರತಾಪ, ಮಳೆರಾಯ...!

ಒಬ್ಬೊಬ್ಬರ ಗೋಳು ಒಂದೊಂದು ರೀತಿ. ಊಟ, ನಿದ್ದೆ, ಆಶ್ರಯವಿಲ್ಲದೇ ಕಣ್ಣೀರಿಡುತ್ತಿದ್ದಾರೆ. ಕಷ್ಟದಲ್ಲಿ ಸಿಲುಕಿರುವವರಿಗೆ ಸಾರ್ವಜನಿಕರಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಅಗತ್ಯ ವಸ್ತುಗಳು, ಅಕ್ಕಿ, ಬಟ್ಟೆ, ಬೇಳೆಕಾಳುಗಳು, ಔಷಧಿಗಳು ಹೀಗೆ ಅಗತ್ಯವಿರುವ ವಸ್ತುಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡುತ್ತಿದ್ದಾರೆ. 

ಕರ್ನಾಟಕ ಪ್ರವಾಹ ಭವಿಷ್ಯ, ಇನ್ನಾರು ದಿನ ಮಳೆ ಎಂದಿದೆ ಪಂಚಾಂಗ

ಸ್ಯಾಂಡಲ್ಲ್‌ ವುಡ್ ತಾರೆಯಲು ನೆರವಿನ ಹಸ್ತ ಚಾಚಿದ್ದಾರೆ. ನಟರಾದ ದರ್ಶನ್, ಸುದೀಪ್, ಉಪೇಂದ್ರ, ರಕ್ಷಿತ್ ಶೆಟ್ಟಿ, ನೆರವಿಗೆ ಮುಂದಾಗಿದ್ದಾರೆ.