ಸಾಕಷ್ಟುವಿಶೇಷತೆಗಳಿಂದ ಕೂಡಿರುವ ‘ನಾನು ಮತ್ತು ಗುಂಡ’ ಸಿನಿಮಾ ಸದ್ಯದಲ್ಲೇ ತೆರೆಗೆ ಬರುತ್ತಿದೆ. ನಾಯಿ ಜತೆಗಿನ ಮನುಷ್ಯ ಪ್ರೀತಿಯನ್ನು ಹೇಳುವ ಸಿನಿಮಾ ಇದಾಗಿದ್ದು, ಮೊದಲ ಬಾರಿಗೆ ಶಿವರಾಜ್‌ ಕೆ ಆರ್‌ ಪೇಟೆ ನಾಯಕನಾಗಿ ನಟಿಸಿದರೆ, ಸಂಯುಕ್ತಾ ಹೊರನಾಡು ಇವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ನವೆಂಬರ್‌ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಆ ಮೂಲಕ ತುಂಬಾ ಗ್ಯಾಪ್‌ ನಂತರ ಸಂಯುಕ್ತಾ ಹೊರನಾಡು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ರಘು ಹಾಸನ್‌ ನಿರ್ಮಿಸಿ, ಶ್ರೀನಿವಾಸ್‌ ತಮ್ಮಯ್ಯ ನಿರ್ದೇಶನದ ಈ ಚಿತ್ರವಿದು.

ನೆರೆ ಸಂತ್ರಸ್ತರಿಗೆ ಚೆಕ್ ನೀಡಿದ ಉಪೇಂದ್ರ ಅಭಿಮಾನಿ

ಚಿದಾನಂದ್‌ ಕ್ಯಾಮೆರಾ, ಕಾರ್ತಿಕ್‌ ಶರ್ಮಾ ಸಂಗೀತ, ಶರತ್‌ ಚಕ್ರವರ್ತಿ ಡೈಲಾಗ್‌, ವಿವೇಕಾನಂದ ಅವರ ಕತೆಯನ್ನು ಒಳಗೊಂಡ ಈ ಚಿತ್ರದಲ್ಲಿ ಸಿಂಬಾ ಹೆಸರಿನ ನಾಯಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದೇ ಹೈಲೈಟ್‌. ಈಗಾಗಲೇ ಮಲಯಾಳಂ ಬ್ಯಾಂಗಲೂರ್‌ ಡೇಸ್‌, ಐರಾವತ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸಂಬಾ, ಸಿನಿಮಾಗಳಲ್ಲಿ ನಟಿಸುವುದಕ್ಕಾಗಿಯೇ ತರಬೇತುಗೊಂಡಿದೆ.

‘ನಾನು ಮತ್ತು ಗುಂಡ’ ಚಿತ್ರದಲ್ಲಿ ಗುಂಡನ ಪಾತ್ರದಲ್ಲಿ ಸಿಂಬಾ ಕಾಣಿಸಿಕೊಂಡಿದೆ. ‘ಇದು ನೈಜ ಕತೆಯನ್ನು ಆಧರಿಸಿರುವ ಸಿನಿಮಾ. ಸಂಬಾ ನಟನೆಯ ದೃಶ್ಯಗಳನ್ನು ಸೆರೆ ಹಿಡಿಯುವುದೇ ದೊಡ್ಡ ಸವಾಲಾಗಿತ್ತು. ಹೀಗಾಗಿ ಸಿನಿಮಾ ತಡವಾಯಿತು’ ಎನ್ನುತ್ತಾರೆ ನಿರ್ಮಾಪಕ ರಘು ಹಾಸನ್‌.

ರಾಜಕಾರಣಕ್ಕೆ ಸುದೀಪ್? ಚಿರಂಜೀವಿಯಿಂದ ಪೈಲ್ವಾನ್ ಕಲಿತ ಪಾಠ

ನಾಯಿ ಪ್ರೀತಿ ಕತೆ: ಅಂದಹಾಗೆ ‘ನಾನು ಮತ್ತು ಗುಂಡ’ ಚಿತ್ರಕ್ಕೆ ವಿಶೇಷವಾದ ಪ್ರಚಾರವನ್ನು ನೀಡುವುದಕ್ಕಾಗಿ ಚಿತ್ರತಂಡ ಹೊರಟಿದೆ. ಆ ನಿಟ್ಟಿನಲ್ಲಿ ನಾಯಿನನ್ನು ಮನೆಯ ಸದಸ್ಯನಂತೆ ಸಾಕುತ್ತಿರುವ, ಅದರ ಜತೆಗೆ ಭಾವನಾತ್ಮಕ ನಂಟು ಬೆಳೆಸಿಕೊಂಡಿರುವವರನ್ನು ಚಿತ್ರತಂಡ ಭೇಟಿ ಮಾಡಿ ತಮ್ಮ ಮತ್ತು ನಾಯಿ ಜತೆಗಿನ ಆಪ್ತವಾಗಿರುವ ಕತೆಗಳನ್ನು ಚಿತ್ರೀಕರಣ ಮಾಡಿಕೊಂಡು ಅವುಗಳಲ್ಲಿ ಅತ್ಯಂತ ಕುತೂಹಲ ಮತ್ತು ವಿಶೇಷವಾಗಿರುವ ಕತೆಗಳನ್ನು ಯೂಟ್ಯೂಬ್‌ ಹಾಗೂ ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಸಾರ ಮಾಡುವ ಪ್ಲಾನ್‌ ಮಾಡಿಕೊಂಡಿದೆ.

ಈಗಾಗಲೇ ಹಲವು ಇಂಥ ನೈಜ ಕತೆಗಳನ್ನು ಚಿತ್ರೀಕರಣ ಮಾಡಿಕೊಂಡಿರು ಚಿತ್ರತಂಡದ ಮುಂದೆ 70 ಕತೆಗಳು ಇವೆ. ವಾರಕ್ಕೆ ಎರಡು ಕತೆಗಳಂತೆ ಯೂಟ್ಯೂಬ್‌ ಹಾಗೂ ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಸಾರ ಮಾಡುವ ಯೋಜನೆ ಹಾಕಿಕೊಂಡಿದೆ. ಜತೆಗೆ ನಾಯಿ ಜತೆಗಿನ ತಮ್ಮ ಕತೆಯನ್ನು ಹೇಳಿಕೊಂಡವರನ್ನು ಚಿತ್ರದ ಪ್ರಿಮಿಯರ್‌ ಶೋಗೂ ಚಿತ್ರತಂಡ ಅಹ್ವಾನಿಸುತ್ತಿದೆ.