ಬೆಂಗಳೂರು[ಡಿ.03]  ರಾಕಿಂಗ್ ಸ್ಟಾರ್ ಯಶ್ -ರಾಧಿಕಾ ಪಂಡಿತ್ ಮನೆಗೆ ಹೊಸ ಸದಸ್ಯರ ಆಗಮನವಾಗಿದ್ದು ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಯಶ್-ರಾಧಿಕಾಗೆ ಹೆಣ್ಣು ಮಗು

ಇದೀಗ ಯಶ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಡಬಲ್ ಸಂತಸ ಹಂಚಿಕೊಂಡಿದ್ದಾರೆ. ಇದೊಂದು ಪುಟ್ಟ ಕೈ, ನನ್ನ ಬೆರಳನ್ನು ಗಟ್ಟಿಯಾಗಿ ಹಿಡಿದುಕೊಂಡಿದೆ..ನನಗೆ ತಂದೆತನದ ದಾರಿಯನ್ನು ತೋರಿಸುತ್ತಿದೆ..ಏನೂ ಗೊತ್ತಿಲ್ಲದೆ ಒಬ್ಬರ ಪ್ರೀತಿಯಲ್ಲಿ ಬೀಳುಗವುದು ಒಂದು ವಿಶೇಷ ಅನುಭೂತಿ ಎಂದು ಯಶ್ ಬರೆದುಕೊಂಡಿದ್ದಾರೆ.