ಡಿ.9 ರಂದು ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ 2ನೇ ಮದುವೆ ವಾರ್ಷಿಕೋತ್ಸವ ಮಾಡಿಕೊಳ್ಳುತ್ತಿದ್ದಾರೆ, ಇದಕ್ಕೆ ಇನ್ನೊಂದು ವಿಶೇಷವೆಂದರೆ ಈ ಸಲದ ಸೆಲೆಬ್ರೇಷನ್‌ನಲ್ಲಿ ಮಗಳಿದ್ದಾಳೆ.

ಇಷ್ಟೆಲ್ಲಾ ಖುಷಿ ಸಂದರ್ಭವನ್ನು ಹಂಚಿಕೊಳ್ಳಲು ರಾಕಿಂಗ್ ಸ್ಟಾರ್ ಇನ್‌ಸ್ಟಾಗ್ರಾಮ್‌ ಸೇರುತ್ತಿದ್ದಾರೆ. ಇಷ್ಟು ದಿನ ರಾಧಿಕ ಪಂಡಿತ್ ಎಲ್ಲಾ ವಿಚಾರವನ್ನು ತಮ್ಮ ಅಕೌಂಟ್ "iamradhikapandit" ನಲ್ಲಿ ಹಂಚಿಕೊಳ್ಳುತ್ತಿದ್ದರು.

ಕೆಲ ದಿನಗಳ ಹಿಂದೆ ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ "ನಿಮ್ಮಯಶ್" ಇದೇ ಹೆಸರನ್ನು "ದಿ ನೇಮ್ ಈಸ್ ಯಶ್" ಎಂದು ಹೆಸರು ಬದಲು ಮಾಡಿಕೊಂಡಿದ್ದರು. ಈಗ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ವಿಡಿಯೋ ಅಪ್ಲೋಡ್ ಮುಕಾಂತರ ಇನ್‌ಸ್ಟಾಗ್ರಾಮ್ ಸೇರುವ ವಿಚಾರ ಹಂಚಿಕೊಂಡಿದ್ದಾರೆ ಈ ಆಕೌಂಟ್‌ ಹೆಸರು ಕೂಡ "TheNameIsYash" ಎಂದು.

"ನನಗೀಗ ಗೊತ್ತಾಗಿದೆ ಯಾಕೆ ಇನ್‌ಸ್ಟಾಗ್ರಾಮ್‌ನಲ್ಲಿ ಇರ್ಬೇಕು ಎಂದು, ಐ ವಿಲ್ ಹೋಪ್ ನಿಮ್ಮೆಲ್ಲರಿಗೂ ರೇಸ್ಪಾನ್ಸ್ ಮಾಡ್ತೀನಿ, ಆ್ಯಂಡ್ ನನಗೀಗ ತಿಳಿದು ಬಂತು ಏನೆಲ್ಲಾ ಹಂಚಿಕೊಳ್ಳಬೇಕೆಂದು ಸ್ಟೇ ಟ್ಯೂನ್ಡ್" ಎಂದಿದ್ದಾರೆ.