ವಾಹ್..! ಈ ಜೋಡಿ ನೋಡೋಕೆ ಸೂಪರ್, ಈಗಲೂ ಚಿತ್ರ ರೀ-ರಿಲೀಸ್ ಆದ್ರೆ 100 ಡೇಸ್ ಮುಟ್ಟುವುದಂತೂ ಗ್ಯಾರಂಟಿ. ಅಂತಹ ಬ್ಲಾಕ್ ಬಸ್ಟರ್ ಮ್ಯಾಚ್ ರಕ್ಷಿತಾ ಹಾಗೂ ದರ್ಶನ್. ಇವರಿಬ್ಬರೂ ಬಹು ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅತ್ತ 'ಕುರುಕ್ಷೇತ್ರ' ಚಿತ್ರದ ಹಿಟ್ ನಂತರ ಕೊಂಚ ಬ್ರೇಕ್ ಬೇಕೆಂದು ದರ್ಶನ್ ಕೀನ್ಯಾ ಅರಣ್ಯದಲ್ಲಿ ವೈಲ್ಡ್ ಲೈಫ್ ಫೋಟೋಶೂಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಇತ್ತ ಒಂದೇ ಸಮಯಕ್ಕೆ ಎರಡು ಕಿರುತೆರೆ ರಿಯಾಲಿಟಿ ಶೋಗಳಿಗೆ ರಕ್ಷಿತಾ ಜಡ್ಜ್ ಆಗಿದ್ದಾರೆ. ಇದರ ನಡುವೆ ಇವರಿಬ್ಬರೂ ಒಟ್ಟಿಗೆ ಸೆರೆ ಹಿಡಿದಿರುವ ಫೋಟೋವನ್ನು ರಕ್ಷಿತಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಸೃಷ್ಟಿಸಿದೆ.
ಕೀನ್ಯಾದ ಕಾಡಲ್ಲಿ ಗಜರಾಜನೊಂದಿಗೆ ದಿನ ಕಳೆದ ಡಿ-ಬಾಸ್!
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡು ರಕ್ಷಿತಾ 'Friends for life, ವಾಟ್ ಅ ಈವನಿಂಗ್' ಎಂದು ಬರೆದುಕೊಂಡಿದ್ದಾರೆ. 'ಕಲಾಸಿಪಾಳ್ಯ' ದಿಂದ 'ಸುಂಟರಗಾಳಿ' ಚಿತ್ರದವರೆಗೂ ಒಟ್ಟಾಗಿ ನಟಿಸಿರುವ ಚಿತ್ರಗಳೆಲ್ಲಾ ಸೂಪರ್ ಹಿಟ್ ಆಗಿದೆ.
ಇನ್ನು ಕನ್ನಡ ಚಿತ್ರರಂಗದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ದರ್ಶನ್ ಎಷ್ಟೇ ಬ್ಯುಸಿ ಇದ್ದರೂ ಸ್ನೇಹಕ್ಕೆ ಬೆಲೆ ಕೊಟ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅದರಲ್ಲೂ ಈ 6 ಅಡಿ ಕಟೌಟ್‌ನ ಏಕವಚನದಲ್ಲಿ ಮಾತನಾಡಿಸುವಷ್ಟು ಕ್ಲೋಸ್ ಗೆಳತಿ ಅಂದ್ರೆ ರಕ್ಷಿತಾ ಪ್ರೇಮ್. ಇವರಿಬ್ಬರನ್ನು ಮತ್ತೆ ಒಟ್ಟಾಗಿ ತೆರೆ ಮೇಲೆ ನೋಡಬೇಕೆಂದು ಆಸೆಪಟ್ಟ ಅಭಿಮಾನಿಗಳಿಗೆ ಈ ಫೋಟೋ ನಿರೀಕ್ಷೆ ಹುಟ್ಟಿಸಿದೆ.
