ದಿ ವಿಲನ್ ಟಿಕೆಟ್ ದರ ಹೆಚ್ಚಳ | ಮಲ್ಟಿಪ್ಲೆಕ್ಸ್ ಧೋರಣೆಗಳ ವಿರುದ್ಧ ನಿರ್ದೇಶಕ ಪ್ರೇಮ್ ಆಕ್ರೋಶ | ಟಿಕೆಟ್ ದರ ಗಳಿಕೆಯ ಶೇ. 50 ರಷ್ಟು ಪಾಲನ್ನು ನಿರ್ಮಾಪಕರಿಗೆ ಕೊಡಲು ಮನವಿ
ಬೆಂಗಳೂರು (ಅ. 10): ದಿ ವಿಲನ್ ಚಿತ್ರ ಟಿಕೆಟ್ ದರ ಏರಿಕೆಯಿಂದಾಗಿ ಸದ್ದು ಮಾಡುತ್ತಿದೆ. ಟಿಕೆಟ್ ದರ ಏರಿಕೆ ಬಗ್ಗೆ ಒಂದೆಡೆ ಚರ್ಚೆ ನಡೆಯುತ್ತಿದ್ದರೆ ಇನ್ನೊಂದೆಡೆ ಚಿತ್ರ ಪ್ರದರ್ಶನದ ಚರ್ಚೆ ನಡೆಯುತ್ತಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆ ನಿಗದಿಪಡಿಸಲಾಗಿರುವ ಟಿಕೆಟ್ ದರದ ಶೇ. 50 ರಷ್ಟು ಭಾಗವನ್ನು ನಿರ್ಮಾಪಕರಿಗೆ ನೀಡಬೇಕೆಂದು ದಿ ವಿಲನ್ ತಂಡ ಒತ್ತಾಯಿಸಿದೆ. ಈ ಬಗ್ಗೆ ನಿರ್ದೇಶಕ ಪ್ರೇಮ್ ಪ್ರಶ್ನೆ ಎತ್ತಿದ್ದಾರೆ.
ನೀವು ನೋಡಲೇಬೇಕಾದ ’ದಿ ವಿಲನ್’ ಫೋಟೋಗಳಿವು !
ಸಿನಿಮಾ ಪ್ರದರ್ಶನದ ವಿಚಾರದಲ್ಲಿ ಮಲ್ಟಿಪ್ಲೆಕ್ಸ್ ಗಳು ಕನ್ನಡಿಗರಿಗೊಂದು ಹಾಗೂ ಪರಭಾಷಿಕರಿಗೊಂದು ನೀತಿ ಅನುಸರಿಸುತ್ತಿರುವುದಕ್ಕೆ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.
