ಬೆಂಗಳೂರು[ಫೆ.25] ನಿರ್ಮಾಪಕ ಕೆ. ಮಂಜು  ಪುತ್ರ  ಶ್ರೇಯಸ್  ಅಭಿನಯದ  'ಪಡ್ಡೆಹುಲಿ' ಚಿತ್ರದ  ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೆ. 26 ರಂದು ಸಂಜೆ 6 ಗಂಟೆಗೆ ಅನಾವರಣ ಮಾಡಲಿದ್ದಾರೆ.

ಇರೋದು ಸಿಂಪಲ್ಲು... ಮನುಷ್ಯ ಸೂಪರ್ರು... ಫೆವರೇಟ್ ನಂಬರ್ ಸಿಕ್ಸು.. ಇವರು 26th ಬರೋದು ಫಿಕ್ಸು... ಬರೋದ್ ಯಾರ್ ಅಂತ ಗೊತ್ತಾಗಬೇಕು ಅಂದ್ರೆ ನಾಳೆ ಸಂಜೆ 6 ಘಂಟೆಗೆ PRK ಆಡಿಯೋ ಯೌಟ್ಯೂಬ್ ಚಾನಲ್ ನೋಡಿ.. ಹೌದು... ದರ್ಶನ್ ನಾಳೆ ಸಂಜೆ 6 ಘಂಟೆಗೆ ಅವರಿಂದ ಪಡ್ಡೆಹುಲಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.

ಕನ್ನಡವೇ ನಮ್ಮಮ್ಮ ಎನ್ನುತ್ತಾ ಸಾಹಸ ಸಿಂಹರಿಗೆ ತಲೆಬಾಗಿದ ‘ಪಡ್ಡೆ ಹುಲಿ’

ಗುರು ದೇಶಪಾಂಡೆ ನಿರ್ದೇಶನದಲ್ಲಿ ಹುಲಿ ಮೂಡಿಬರುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬ್ಯಾನರ್‌ನ ಪಿಆರ್‌ಕೆ ಆಡಿಯೋದ ಮೂಲಕ ಹಾಡು ಲಾಂಚ್ ಮಾಡಲಾಗಿದ್ದು ಪುನೀತ್, ಉಪೇಂದ್ರ, ರಕ್ಷಿತ್ ಶೆಟ್ಟಿ, ಶರಣ್ ಸೇರಿದಂತೆ ಅನೇಕರು ಶ್ರೇಯಸ್‌ಗೆ ಶುಭ ಕೋರಿದ್ದರು. ಪಡ್ಡೆಹುಲಿ ಚಿತ್ರ ಟೀಸರ್ ನಿಂದಲೇ ಗಮನ ಸೆಳೆದಿತ್ತು. ಪ್ರೇಮಿಗಳ ದಿನದಂದು ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು.