ಬೆಂಗಳೂರು (ಫೆ. 16): ಹೆಣ್ಣಿನ ಮನಸ್ಸಿನ ತುಮುಲಗಳನ್ನು, ವಿಧವೆ ಹೆಣ್ಣು ಮಗಳೊಬ್ಬಳ ಮನಸ್ಥಿತಿಯನ್ನು ಅದ್ಭುತವಾಗಿ ಕಟ್ಟಿಕೊಟ್ಟ ಚಿತ್ರ ’ ನಾತಿ ಚರಾಮಿ’. ಈ ಸಿನಿಮಾದ ವಿಶೇಷ ಪ್ರದರ್ಶನವನ್ನು ಅವಿರತ ಪ್ರತಿಷ್ಠಾನದಿಂದ ಫೆ. 17 ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ. 

Film Review: ಬಯಕೆ, ಭಾವನೆಗಳಿಗೆ ಉತ್ತರ ’ನಾತಿಚರಾಮಿ’

ಸಿನಿಮಾ, ರಂಗಭೂಮಿ, ನಾಟಕ, ಸಂಗೀತ ಕಾರ್ಯಕ್ರಮಗಳನ್ನು ಅವಿರತ ಪ್ರತಿಷ್ಠಾನ ಬೆಂಬಲಿಸುತ್ತಾ ಬಂದಿದೆ. ದಶಮಾನೋತ್ಸವದ ಸಂಭ್ರಮದಲ್ಲಿದೆ. ಈ ವಿಶೇಷವಾಗಿ ’ನಾತಿ ಚರಾಮಿ’ ಸಿನಿಮಾದ ವಿಶೇಷ ಪ್ರದರ್ಶನವನ್ನು  ಆಯೋಜಿಸಲಾಗಿದೆ. 

ಹೆಣ್ಣಿನ ದೈಹಿಕ ಬಯಕೆಯ ತೊಳಲಾಟವನ್ನು ಹೇಳುತ್ತೆ ’ನಾತಿ ಚರಾಮಿ’

ನಾತಿಚರಾಮಿ ಯನ್ನು ಮಿಸ್ ಮಾಡಿಕೊಂಡವರು  ಈ ಚಿತ್ರವನ್ನು ವೀಕ್ಷಿಸಬಹುದು. ಟಿಕೆಟ್ ಬೆಲೆ 200 ರೂ.  ಈ ಚಿತ್ರ ಪ್ರದರ್ಶನದಲ್ಲಿ ಚಿತ್ರತಂಡ ಕೂಡಾ ಭಾಗಿಯಾಲಿದೆ. ಪ್ರದರ್ಶನದ ಬಳಿಕ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. 

ಶೃತಿ ಹರಿಹರನ್, ಸಂಚಾರಿ ವಿಜಯ್, ಪೂರ್ಣ ಚಂದ್ರ ಮೈಸೂರು, ಬಾಲಾಜಿ ಮನೋಹರ್ ಚಿತ್ರದಲ್ಲಿ ನಟಿಸಿದ್ದಾರೆ.