ಬೆಂಗಳೂರು (ಜ.29): ಅಂಬಾರಿ, ಅದ್ದೂರಿ, ಐರಾವತ ಖ್ಯಾತಿಯ ನಿರ್ದೇಶಕ ಎ ಪಿ ಅರ್ಜುನ್ ಹೊಸ ಸಿನಿಮಾವೊಂದನ್ನು ಮಾಡಿದ್ದಾರೆ. ಸಿನಿಮಾ ಹೆಸರನ್ನು ರೊಮ್ಯಾಂಟಿಕ್ ಆಗಿ ಇಟ್ಟಿದ್ದಾರೆ. ಸಿನಿಮಾ ಹೆಸರನ್ನು ’ಕಿಸ್’ ಎಂದು ಇಟ್ಟಿದ್ದಾರೆ. ಹೆಸರಿಗೆ ತಕ್ಕಂತೆ ಸಿನಿಮಾ ಕೂಡಾ ರೊಮ್ಯಾಂಟಿಕ್ ಆಗಿದೆ. 

ಈ ಚಿತ್ರದ ಶೀಲಾ- ಸುಶೀಲಾ ಹಾಡು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಈಗ ಇನ್ನೊಂದು ಹಾಡು ಬಿಡುಗಡೆಯಾಗಿದ್ದು ಈ ಹಾಡು ಕೇಳುಗರಿಗೆ ಕಚಗುಳಿಯಿಡುವಂತಿದೆ. 

ಎ ಪಿ ಅರ್ಜುನ್ ಬರೆದಿರುವ ನೀನೆ ಮೊದಲು... ನೀನೆ ಕೊನೆ ಎಂಬ ಹಾಡಿಗೆ ವಿ ಹರಿಕೃಷ್ಣ ಪುತ್ರ ಆದಿತ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ವಿರಾಟ್, ಶ್ರೀಲೀಲಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಶ್ರೇಯಾ ಘೋಷಾಲ್ ಈ ಹಾಡನ್ನು ಹಾಡಿದ್ದಾರೆ.