Asianet Suvarna News Asianet Suvarna News

ಹೊಸ ವರ್ಷಕ್ಕೆ ಬಜಾರ್ ಹವಾ

ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಸಿನಿಮಾ ಸದ್ದು ಮಾಡುವುದಕ್ಕೆ ಆರಂಭಿಸಿದೆ.

Sandalwood movie Bazaar to Release in January
Author
Bengaluru, First Published Dec 31, 2018, 9:59 AM IST
  • Facebook
  • Twitter
  • Whatsapp

ಈಗಾಗಲೇ ಟೀಸರ್‌ನಿಂದಲೇ ಸೌಂಡು ಮಾಡಿರುವ ಈ ಚಿತ್ರದ ಟ್ರೇಲರ್ ಹಾಗೂ ಬಿಡುಗಡೆಯ ದಿನಾಂಕವನ್ನು ಪಕ್ಕಾ ಮಾಡಿದೆ ಚಿತ್ರತಂಡ. ಆ ಮೂಲಕ ಹೊಸ ವರ್ಷದ ಎರಡನೇ ವಾರದಲ್ಲಿ ‘ಬಜಾರ್’ ಹವಾ ಶುರುವಾಗಲಿದೆ. ಹೌದು, ಜನವರಿ 3 ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ನಂತರ ಸಿನಿಮಾ ಬಿಡುಗಡೆಗೆ ದಿನಾಂಕ್ ಪಿಕ್ಸ್ ಮಾಡಲಾಗಿದೆ. ಅಂದರೆ ಜನವರಿ 11 ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.

ಹಾಡು, ಟೀಸರ್ ಮೂಲಕವೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಸಿನಿಮಾ ಇದು. ಅಲ್ಲದೆ ಈ ಚಿತ್ರಕ್ಕೆ ನಟ ದರ್ಶನ್ ಕೂಡ ಸಾಥ್ ನೀಡಿರುವುದರಿಂದ ಚಿತ್ರತಂಡಕ್ಕೆ ಆನೆಬಲ ಬಂದಂತಾಗಿದೆ. ಧನ್ವೀರ್ ಹಾಗೂ ಅಧಿತಿ ಪ್ರಭುದೇವಾ ಜೋಡಿಯಾಗಿ ನಟಿಸಿರುವ ಈ ಚಿತ್ರ ನಾಯಕ ಧನ್ವೀರ್‌ಗೆ ಇದು ಮೊದಲ ಸಿನಿಮಾ. ಹೀಗಾಗಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಈ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

‘ನಿಮ್ಮ ಸಿನಿಮಾ ಯಾವಾಗ ಬಿಡುಗಡೆ ಅಂತ ಪದೇ ಪದೇ ಕೇಳುತ್ತಲೇ ಇದ್ದರು. ಎಲ್ಲೇ ಹೋದರೂ ನನಗೆ ಇದೇ ಪ್ರಶ್ನೆ ಬರುತ್ತಿತ್ತು. ಕೊನೆಗೂ ಒಳ್ಳೆಯ ಸಮಯ ನೋಡಿಕೊಂಡು ಬರುತ್ತಿದ್ದೇವೆ. ಜನವರಿ 11 ರಂದು ಸಿನಿಮಾ ತೆರೆಗೆ ಬರುತ್ತಿದೆ. ಇದಕ್ಕೂ ಮುನ್ನ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತಿದ್ದೇವೆ. ಹೊಸ ನಟನಾದರೂ ಅದ್ಭುತವಾಗಿ ನಟಿಸಿದ್ದಾನೆ. ಇಡೀ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಹೀಗಾಗಿ ನಾನೂ ಕೂಡ ಕುತೂಹಲದಲ್ಲಿ ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಸಿಂಪಲ್ ಸುನಿ. ಈಗಷ್ಟೆ ಶರಣ್ ನಟನೆಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ತಯಾರಿಯಲ್ಲಿರುವ ಸುನಿ ಅವರಿಗೆ ‘ಬಜಾರ್’ ಬಿಡುಗಡೆ ಮತ್ತೊಂದು ಸಂಭ್ರಮ ತಂದು ಕೊಟ್ಟಿದೆ.

Follow Us:
Download App:
  • android
  • ios