Asianet Suvarna News Asianet Suvarna News

ಬುರ್ಜ್ ಖಲೀಫಾದಲ್ಲಿ ಅನಂತ್‌ನಾಗ್

ದುಬೈ ಅಂದಾಕ್ಷಣ ಜಗತ್ತಿನ ಪ್ರವಾಸಿಗರ ಕಣ್ಮುಂದೆ ಬರೋದು ‘ಬುರ್ಜ್ ಖಲೀಫಾ’ ಕಟ್ಟಡ. ಬರೋಬ್ಬರಿ 160 ಅಂತಸ್ತುಗಳ ಈ ಕಟ್ಟಡದಲ್ಲಿ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರತಂಡ ಚಿತ್ರೀಕರಣ ನಡೆಸಿದೆ. ಆ ಕಾರಣಕ್ಕೆ ಈ ಚಿತ್ರ ವಿಶೇಷ ಎನ್ನುತ್ತಾರೆ ಅನಂತನಾಗ್.

Sandalwood Latest News

ನಿರ್ದೇಶಕ ನರೇಂದ್ರ ಬಾಬು ನಿರ್ದೇಶನದ ಹೊಸ ಚಿತ್ರ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’. ‘ಸಂತ ಕಬೀರ’ ನಂತರ ಮತ್ತೆ ಅನಂತ ನಾಗ್ ಮತ್ತು ನರೇಂದ್ರ ಬಾಬು ಜೋಡಿ ಇಲ್ಲಿ ಒಂದಾಗಿದೆ. ಈ ಚಿತ್ರದ ಚಿತ್ರೀಕರಣ ಮುಗಿದು ರಿಲೀಸ್‌ಗೆ ಸಿದ್ಧತೆ ನಡೆದಿದೆ. ಆಡಿಯೋ ಬಿಡುಗಡೆ ಆಗಿ ಹೋಗಿದೆ. ಈ ಚಿತ್ರ ಅನೇಕ ಕಾರಣಕ್ಕೆ ಸದ್ದು ಮಾಡುತ್ತಿದೆ, ಸುದ್ದಿಯೂ ಆಗುತ್ತಿದೆ. ಇದೊಂದು ಎರಡು ತಲೆಮಾರುಗಳ ಕಥಾನಕ ಅನ್ನೋದು ಚಿತ್ರದ ಕತೆಯ ಬಗೆಗಿರುವ ಕುತೂಹಲ. ಈ ಚಿತ್ರ ಮಗದೊಂದು

ಕಾರಣಕ್ಕೂ ಈಗ ಕುತೂಹಲ ಮೂಡಿಸಿದೆ. ಅದು ಚಿತ್ರದ ಚಿತ್ರೀಕರಣಕ್ಕೆ ಲೊಕೇಷನ್ ಕಾರಣಕ್ಕೆ ಅನ್ನೋದು ಇಲ್ಲಿ ವಿಶೇಷ. ದುಬೈನ ಬುರ್ಜ್ ಖಲೀಫಾ ಗಗನ ಚುಂಬಿ ಕಟ್ಟಡದಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.

ದುಬೈ ಅಂದಾಕ್ಷಣ ಜಗತ್ತಿನ ಪ್ರವಾಸಿಗರ ಕಣ್ಮುಂದೆ ಬರೋದು ‘ಬುರ್ಜ್ ಖಲೀಫಾ’ ಕಟ್ಟಡ. ಬರೋಬ್ಬರಿ 160 ಅಂತಸ್ತುಗಳ ಈ ಕಟ್ಟಡದಲ್ಲಿ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರತಂಡ ಚಿತ್ರೀಕರಣ ನಡೆಸಿದೆ. ಆ ಕಾರಣಕ್ಕೆ ಈ ಚಿತ್ರ ವಿಶೇಷ ಎನ್ನುತ್ತಾರೆ ಅನಂತನಾಗ್.

‘ಈ ಚಿತ್ರದ ಕತೆಗೆ ತಕ್ಕಂತೆ ವಿದೇಶಕ್ಕೆ ಹೋಗುವ ಅನಿವಾರ್ಯತೆ ಇತ್ತು. ಆದರೆ ನಿರ್ಮಾಪಕರಾದ ಸುದರ್ಶನ್ ಮತ್ತು ರಾಮಮೂರ್ತಿ ಅಷ್ಟೊಂದು ಖರ್ಚುವೆಚ್ಚದ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕ್ಕಿದ್ದರು. ಆಗ ನಾನು ಉದ್ಯಮಿ ಹರೀಶ್ ಶೇರಿಗಾರ್ ಬಳಿ ಈ ಕಷ್ಟ ಹೇಳಿಕೊಂಡೆ, ಅವರು ಈ ಚಿತ್ರದ ನಿರ್ಮಾಣಕ್ಕೆ ತಾವು ಕೈ ಜೋಡಿಸುವುದಾಗಿ ಹೇಳಿದರು. ತಕ್ಷಣವೇ ಚಿತ್ರೀಕರಣಕ್ಕೆ ದುಬೈ ಬರಲು ಹೇಳಿದರು.

ಅಲ್ಲಿಗೆ ಹೋದಾಗ ವಿಶೇಷ ಅನುಮತಿಯೊಂದಿಗೆ ಬುರ್ಜ್ ಖಲೀಫಾ ಕಟ್ಟಡದ ಒಳಗಡೆ ಚಿತ್ರೀಕರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು’ ಎನ್ನುತ್ತಾರೆ ಅನಂತ ನಾಗ್. ಸ್ಟಾರ್ ಸಿನಿಮಾಗಳ ಆಚೆ ಹೊಸಬರು ಕೂಡ ಒಂದು ಹಾಡಿನ ನೆಪದಲ್ಲಿ ವಿದೇಶಿ ಪ್ರವಾಸ ಮುಗಿಸಿಕೊಂಡು ಬರೋದು ಈಗ ಮಾಮೂಲು. ಹಾಗಿದ್ದರೂ ಇಷ್ಟು ದಿನ ದುಬೈನ ಬುರ್ಜ್ ಖಲೀಫಾ ಕಟ್ಟಡದ ಒಳಗಡೆ ಯಾವುದೇ ಚಿತ್ರಕ್ಕೂ ಚಿತ್ರೀಕರಣ ಮಾಡಿಕೊಳ್ಳಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಇದೇ ಮೊದಲು ಆ ಅವಕಾಶ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರಕ್ಕೆ ಸಿಕ್ಕಿದೆ. ಇದಕ್ಕೆ ಕಾರಣರಾಗಿರುವ ನಿರ್ಮಾಪಕ ಹರೀಶ್ ಶೇರಿಗಾರ್ ‘ಈ ಚಿತ್ರ ಹಲವು ಕಾರಣಕ್ಕೆ ವಿಶೇಷ ಎನಿಸುತ್ತದೆ. ಅದರಲ್ಲಿ ಬುರ್ಜ್ ಖಲೀಫಾ ಲೊಕೇಷನ್ ಕೂಡ ಒಂದು’ ಎನ್ನುತ್ತಾರೆ.

Follow Us:
Download App:
  • android
  • ios