ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಸದ್ಯ 'ದಿ ವಿಲನ್', 'ಪೈಲ್ವಾನ್' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಸ್ಯಾಂಡಲ್'ವುಡ್ ಕಿಚ್ಚ ಸುದೀಪ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು, ಸುದೀಪ್ ಜೊತೆ ಮಾತಡೋಕ್ಕೆ, ಅವರ ಜೊತೆ ಒಂದು ಸಿನಿಮಾ ಮಾಡೋ ಚಾನ್ಸ್ ಸಿಕ್ರೆ ಸಾಕಾಪ್ಪ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಇನ್ನು ಸುದೀಪ್ ಅವರು ಸರಳ ಸುಂದರ ವ್ಯಕ್ತಿತ್ವದವ್ರು. ಆದರೆ ಸಡನ್ ಆಗಿ ಕಿಚ್ಚ ಬಾಲಿವುಡ್ ಸೂಪರ್ ಸ್ಟಾರ್ ನಟನಿಗೆ ವಿಲನ್ ಆಗ್ತಿದ್ದಾರೆ ಅನ್ನೋ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ 'ದಿ ವಿಲನ್', 'ಪೈಲ್ವಾನ್' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಅವರಿಗೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ' ಚಿತ್ರದಲ್ಲಿ ನಟಿಸಲು ಆಫರ್ ಬಂದಿತ್ತಾದರೂ, ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಕೈಬಿಟ್ಟಿದ್ದರು. ಆದರೆ ಚಿತ್ರದ ನಿರ್ದೇಶಕರು, ಸುದೀಪ್ ಅವರೇ ಆ ಪಾತ್ರವನ್ನು ಮಾಡಬೇಕೆಂದು ಹಠ ಹಿಡಿದಿದ್ದು, ಕೊನೆಗೆ ಕಿಚ್ಚ ಒಪ್ಪಿಕೊಂಡಿದ್ದಾರೆ. ಇನ್ನು ಹಾಲಿವುಡ್ ಚಿತ್ರ 'ರೈಸನ್'ನಲ್ಲಿಯೂ ಅಭಿನಯಿಸ್ತಿರೋ ಸುದೀಪ್ ಬಾಲಿವುಡ್ ಸ್ಟಾರ್ ಒಬ್ಬರಿಗೆ ವಿಲನ್ ಆಗಿದ್ದಾರಂತೆ.

ರಣವೀರ್ ಸಿಂಗ್'ಗೆ ವಿಲನ್

ಡೈರೆಕ್ಟರ್ ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳಲಿರುವ ಮುಂದಿನ ಪ್ರಾಜೆಕ್ಟ್ ನಲ್ಲಿ ರಣವೀರ್ ಸಿಂಗ್ ನಾಯಕರಾಗಿದ್ದು, ಇದರಲ್ಲಿ ಖಡಕ್ ವಿಲನ್ ರೋಲ್'ಗೆ ಸುದೀಪ್ ಅವರನ್ನು ಕೇಳಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಸುದೀಪ್ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿಲವಾದರೂ ಕಥೆ ಕೇಳಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಅಭಿನಯಿಸುವ ಸುದ್ದಿ ಪಕ್ಕ ಆಗಬೇಕಾದರೆ ಅಭಿಮಾನಿಗಳು ಕೆಲವು ದಿನಗಳು ಕಾಯಲೇಬೇಕು.