ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ವಿಶ್ವದಾದ್ಯಂತ ತೆರೆಕಂಡಿದ್ದು, ಭರ್ಜರಿ ಯಶಸ್ಸು ಗಳಿಸುತ್ತಿದೆ. ಚಿತ್ರದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯೂ ಅದ್ಭುತವಾಗಿ ನಟಿಸಿದ್ದು, ಈ ಪೈಕಿ ಅರೆಹುಚ್ಚನಾಗಿ ಅಭಿನಯಸಿದ್ದ ಲಕ್ಷ್ಮೀಪತಿ ಇನ್ನಿಲ್ಲ.
ಲಕ್ಷ್ಮೀಪತಿ ಚಿತ್ರ ಬಿಡುಗಡೆಗೂ ಮುನ್ನವೇ ನಿಧನರಾಗಿದ್ದರೆಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ. ಇದನ್ನು ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಲಕ್ಷ್ಮೀಪತಿ ಅವರ ನಿಧನದ ಸುದ್ದಿ ಜೊತೆಗೆ ಅವರು ಅಭಿನಯಿಸಿರುವ ದೃಶ್ಯದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಜಾಂಡೀಸ್ ನಿಂದ ಬಳಲುತ್ತಿದ್ದ ಲಕ್ಷ್ಮೀಪತಿ ಕೆಜಿಎಫ್ ಚಿತ್ರ ತೆರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಭುವನ್ ಗೌಡ ಶೇರ್ ಮಾಡಿರುವ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದ್ದು ಲಕ್ಷ್ಮೀಪತಿ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತಿದ್ದಾರೆ.
