ಕನ್ನಡ ಚಿತ್ರರಂಗದ ಯಂಗ್ ಆ್ಯಂಡ್ ಸ್ಟೈಲೀಶ್ ನಟ ನೆನಪಿರಲಿ ಪ್ರೇಮ್ ತನ್ನ 25ನೇ ಚಿತ್ರ ವಿಭಿನ್ನವಾಗಿರಬೇಕೆಂದು ಡಿಫರೆಂಟ್‌ ಆಗಿ ತಯಾರಿ ಮಾಡಿಕೊಂಡಿದ್ದಾರೆ.

ಜೀವನದಲ್ಲಿ 25ನೇ ಸಿನಿಮಾ ಅಂದ್ಮೇಲೆ ಕೊನೆವರೆಗೂ ಒಂದು ಗೊಲ್ಡನ್ ನೆನೆಪಿಗಳ ಹಾಗೆ ಇರುವುದಂತೂ ಗ್ಯಾಂಟ್‌ ಆ ಕಾರಣದಿಂದ ಲೈಫ್‌ ಜತೆ ಒಂದ್ ಸೆಲ್ಫಿ ಚಿತ್ರದ ನಂತರ ಒಂದೂವರೆ ವರ್ಷಗಳ ಕಾಲ ಬ್ರೇಕ್‌ ತೆಗೆದುಕೊಂಡು ತನ್ನ ಭರ್ಜರಿ ತಯಾರಿ ಮಾಡಿಕೊಂಡು ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.

ನೆನಪಿರಲಿ ಪ್ರೇಮ್‌ಗೆ 25ರ ಸಂಭ್ರಮ

ಇನ್ನು ಚಿತ್ರ ವಿಶೇಷತೆ ಏನೆಂದರೆ ಇದೇ ಮೊದಲ ಭಾರಿ ಕನ್ನಡ ಚಿತ್ರವೊಂದರಲ್ಲಿ ಡಾ.ರಾಜ್‌ಕುಮಾರ್ ಅವರ ಬಗ್ಗೆ ಹಾಡೊಂದಿದ್ದು ಅದನ್ನು ಸ್ವತಃ ಪುನೀತ್ ರಾಜ್‌ಕುಮಾರ್ ಹಾಡಿದ್ದಾರೆ. ಅಷ್ಟೇ ಅಲ್ಲದೆ ಪುನೀತ್ ಅವರೇ ಪ್ರೇಮ್‌ರನ್ನು ಕರೆದು ತಮ್ಮ ಸೆಲ್ಫಿ ತೆಗೆದುಕೊಂಡಿದ್ದು 'I am really blessed, ನಿಜಕ್ಕೂ ನೀವು ತಂದೆಗೆ ತಕ್ಕ ಮಗ' ಎಂದಿದ್ದಾರೆ ಪ್ರೇಮ್. ದೇವರು ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ಹಾಗೂ ಯಶಸ್ಸು ಕೊಟ್ಟು ಕಾಪಾಡಲಿ ಎಂದು ವೈಯಕ್ತಿಕವಾಗಿ ಹಾಗೂ ಪ್ರೇಮಂ ಪೂಜ್ಯಮ್ ತಂಡದ ಪರವಾಗಿ ಪ್ರೇಮ್ ಪ್ರಾರ್ಥಿಸಿದ್ದಾರೆ.