Asianet Suvarna News Asianet Suvarna News

ಕನ್ನಡಕ್ಕೆ ಬಂತು ಕ್ವೀನ್ ಚಿತ್ರ! ಇಲ್ಲಿದೆ ಬಟರ್ ಫ್ಲೈ ಫಸ್ಟ್ ಲುಕ್

ದಕ್ಷಿಣದ ಅಷ್ಟು ಭಾಷೆಗಳಲ್ಲೂ ಬರುತ್ತಿರುವ ಹಿಂದಿಯ ‘ಕ್ವೀನ್’ ಕನ್ನಡದ ಅವತರಣಿಕೆ ‘ಬಟರ್‌ಫ್ಲೈ’ ಚಿತ್ರದ ಫಸ್ಟ್ ಲುಕ್ ಹೊರ ಬಂದಿದೆ.

Sandalwood film Butterfly first look reveled
Author
Bengaluru, First Published Oct 20, 2018, 10:41 AM IST
  • Facebook
  • Twitter
  • Whatsapp

ಚಿತ್ರದ ನಾಯಕಿ ಪಾರೂಲ್ ಯಾದವ್ ಮೋಹಕ ನಗುವಿನೊಂದಿಗೆ ಪೋಸು ನೀಡಿದ್ದು, ಅವರ ಹಿನ್ನೋಟದಲ್ಲಿ ಪ್ರಸಿದ್ಧ ಐಫೆಲ್ ಟವರ್ ಕೂಡ ನಾಚಿ ನೀರಾಗಿದೆ. ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ ಚಿತ್ರವಿದು. 

ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ನಿರ್ಮಾಣವಾಗಿದೆ. ಕನ್ನಡದಲ್ಲಿ ಪಾರೂಲ್ ಯಾದವ್ ನಾಯಕಿ ಆಗಿದ್ದಾರೆ. ಕಥಾ ನಾಯಕಿ ವಿಚಾರಕ್ಕೆ ಬಂದರೆ, ಪಾರೂಲ್ ಯಾದವ್ ಗೋಕರ್ಣ ಹುಡುಗಿ ಪಾರ್ವತಿ ಆಗಿದ್ದಾರೆ. ಪಕ್ಕಾ ಗ್ರಾಮೀಣ ಸೊಗಡಿನ ಈ ಹುಡುಗಿ ನಗಿಸುತ್ತಾಳೆ, ಅಳಿಸುತ್ತಾಳೆ, ನಗು ಮೊಗದ ಮಂದಹಾಸದಲ್ಲಿ ಮುಳುಗಿಸುತ್ತಾಳೆ. ಆಕೆ ಕಥಾ ನಾಯಕಿ ನಮ್ಮ ನಿಮ್ಮ ನಡುವಿನ ಮತ್ಯಾರೋ ಯುವತಿಯೂ ಆಗಿರುತ್ತಾಳೆ ಎನ್ನುತ್ತಾರೆ ನಟಿ ಪಾರೂಲ್ ಯಾದವ್. ಚಿತ್ರ ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ರೆಡಿ ಆಗಿದೆ.

ನನ್ನ ವೃತ್ತಿ ಬದುಕಿನಲ್ಲಿ ಅತ್ಯುತ್ತುಮ ಅನುಭವ ನೀಡಿದ ಪಾತ್ರ. ನಾನು ಜೀವಿಸಿದ ಪಾತ್ರ. ಹಾಗಾಗಿಯೇ ಈ ಪಾತ್ರ, ಚಿತ್ರ ಎರಡರ ಮೇಲೂ ಅತೀವ ವಿಶ್ವಾಸ ನನಗಿದೆ. ಕನ್ನಡಿಗರಿಗೆ ಇದೊಂದು ಒಳ್ಳೆಯ ಕೊಡುಗೆ ಎನ್ನುವ ನಂಬಿಕೆ ನನಗಿದೆ. - ಪಾರೂಲ್ ಯಾದವ್, ನಟಿ

Sandalwood film Butterfly first look reveled

Follow Us:
Download App:
  • android
  • ios