ನ್ಯಾಷನಲ್ ಅವಾರ್ಡ್ ವಿನ್ನರ್ ನಿಖಿಲ್ ಮಂಜು ನಿರ್ದೇಶನದ ‘ಅಮ್ಮನ ಮನೆಯಲ್ಲಿ’ ಚಿತ್ರದ ಮೂಲಕ ಮತ್ತೊಮ್ಮೆ ಸಿನಿ ಜರ್ನಿ ಶುರು ಮಾಡಿದ್ದಾರೆ ರಾಘಣ್ಣ.

 

ಕರ್ನಾಟಕದಲ್ಲಿ ರಿಲೀಸ್ ಆದ ನಂತರ ಫಾರಿನ್ ನಲ್ಲಿ ಸಿನಿಮಾ ರಿಲೀಸ್ ಆಗುವುದು ಸಹಜ. ಆದರೆ ‘ಅಮ್ಮನ ಮನೆ ’ ಸಿನಿಮಾ ಮಾತ್ರ ಮೊದಲು ವಿದೇಶದಲ್ಲಿ ಬಿಡುಗಡೆ ಆಗಲಿರುವುದು ವಿಶೇಷ.

ಅಮ್ಮನ ಮನೆಯಲ್ಲಿ ರಾಜೀವನಾಗಿ ರಾಘಣ್ಣ!

ಫೆಬ್ರವರಿ 28ರಂದು ಫಾರಿನ್ ನಲ್ಲಿ ಬಿಡುಗಡೆ ಆಗಲಿದ್ದು ಕರ್ನಾಟದಲ್ಲಿ ಮಾರ್ಚ್ ನಲ್ಲಿ ರಿಲೀಸ್ ಆಗುತ್ತದೆ. ನ್ಯೂಜಿಲ್ಯಾಂಡ್, ಆಕ್ಲೆಂಡ್, ಆಸ್ಟ್ರೇಲಿಯಾ ಮೆಲ್ಬರ್ನ್ ಹಾಗೂ ಸಿಂಗಾಪೂರದಲ್ಲಿ ರಿಲೀಸ್ ಆಗೋದು ಖಚಿತವಾಗಿದೆ.

 

ಸಾಲ್ಟ್ ಆ್ಯಂಡ್ ಪೆಪ್ಪರ್ ಹೇರ್ ಲುಕ್ ನಲ್ಲಿ ಮಾಡಿಸಿದ ಫೋಟೋ ಶೋಟ್ ಎಲ್ಲರ ಗಮನ ಸೆಳೆದು ಈ ವಯಸ್ಸಲ್ಲೂ ಯಂಗ್ ಆಗಿ ಕಾಣಿಸಿಕೊಳ್ಳುವ ಪವರ್ ರಾಘಣ್ಣಗೆ ಮಾತ್ರ ಎನ್ನೋದು ಅಭಿಮಾನಿಗಳ ಮಾತು.