ಲಕ್ಷಾಂತರ ಜನರ ಪಾಲಿಗೆ ಅನ್ನದಾತ, ಕಾಫಿ ಡೇ ಸಾಮ್ರಾಜ್ಯದ ಸಾಮ್ರಾಟ ಸಿದ್ಧಾರ್ಥ್ ನೇತ್ರಾವತಿ ನದಿಯಲ್ಲಿ ತಮ್ಮ ಜೀವನ ಕೊನೆಗೊಳಿಸಿಕೊಂಡಿದ್ದಾರೆ.  ಪಾಶ್ಚಿಮತ್ಯ ಕೆಫೆ ಸಂಸ್ಕೃತಿಯನ್ನು ಭಾರತಕ್ಕೆ ಪರಿಚಯಿಸಿದ್ದ ನವೋದ್ಯಮಿ ಸಿದ್ಧಾರ್ಥ್. ಸಿದ್ಧಾರ್ಥ್ ಸಾವಿಗೆ ಇಡೀ ಕಾಫಿ ನಾಡು, ಅವರನ್ನು ನಂಬಿಕೊಂಡು ಬದುಕುತ್ತಿದ್ದ ಕಾರ್ಮಿಕ ವರ್ಗ, ಇಡೀ ರಾಜ್ಯದ ಜನ ಕಂಬನಿ ಮಿಡಿಯುತ್ತಿದ್ದಾರೆ.

ಸ್ಯಾಂಡಲ್ ವುಡ್ ಸಿದ್ಧಾರ್ಥ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿ, ಕಾಫಿ ಹೇಗೆ ಸಾವಿರಾರು ಜನರಿಗೆ ಕೆಲಸ ಕೊಡುವ ಉದ್ಯಮವಾಗುತ್ತದೆ ಎಂದು ತೋರಿಸಿಕೊಟ್ಟ ಡೈನಾಮಿಕ್ ಉದ್ಯಮಿ ಸಿದ್ಧಾರ್ಥ್. ಅವರ ಸಾವು ನೋವು ತಂದಿದೆ. ಅವರು ಮಾಡಿರುವ ಕೆಲಸ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದ್ದಾರೆ. 

 

‘ ನಮ್ಮ ಮಂಡ್ಯ ಜಿಲ್ಲೆಯವರಾದ,ಶ್ರೀ ಎಸ್.ಎಂ.ಕೃಷ್ಣ ಅವರ ಅಳಿಯ, ಕೆಫೆ ಕಾಫೀ ಡೇ ಸಂಸ್ಥಾಪಕ, ಉದ್ಯಮಿ ಸಿದ್ದಾರ್ಥ್ ಅವರ ಸಾವು ತೀವ್ರ ಆಘಾತ ತಂದಿದೆ. ಎಸ್.ಎಂ.ಕೃಷ್ಣ ರವರಿಗೂ ಹಾಗೂ ಅವರ ಕುಟುಂಬದವರಿಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ,ಸಿದ್ದಾರ್ಥ್ ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ.  

 

 

ನಟಿ ರಾಗಿಣಿ ದ್ವಿವೇದಿ ಕೂಡಾ ಸಂತಾಪ ಸೂಚಿಸಿದ್ದಾರೆ. 

ಉಪೇಂದ್ರ ಕೂಡಾ ಸಂತಾಪ ಸೂಚಿಸಿದ್ದಾರೆ.