ಭದ್ರಾವತಿ[ಡಿ.20]: ನಿರ್ದೇಶಕ, ನಿರ್ಮಾಪಕ ಎಸ್‌. ನಾರಾಯಣ್‌ ಅವರ ಮಾತೃಶ್ರೀ ಕಮಲಮ್ಮ(84) ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನ ಹೊಂದಿದರು.

ಮೃತರಿಗೆ ಪುತ್ರರಾದ ಎಸ್‌.ನಾರಾಯಣ್‌, ನಿರ್ಮಾಪಕ ಎಸ್‌.ಗೋವಿಂದ್‌ ಇದ್ದಾರೆ. 25 ದಿನಗಳಿಂದ ಮೆದುಳು ಸಂಬಂಧಿ ​ಕಾಯಿಲೆಯಿಂದ ಬಳಲುತ್ತಿದ್ದ ಕಮಲಮ್ಮ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಾಂಧಿ ​ನಗರದಲ್ಲಿರುವ ನಿವಾಸದಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ಬುಧವಾರ ಸಂಜೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.