'ಕುರುಕ್ಷೇತ್ರ' ಬಿಡುಗಡೆಯ ಬ್ಯುಸಿಯಲ್ಲಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಅಭಿಮಾನಿಗಳೇನೂ ಕಡಿಮೆ ಇಲ್ಲ. ಕೇಕ್, ಫೋಟೋ ಅಥವಾ ಅಚ್ಚೆ ಹಾಕಿಸಿಕೊಂಡೇ ನೆಚ್ಚಿನ ಸ್ಟಾರ್ ಮೀಟ್ ಮಾಡಲು ಅಭಿಮಾನಿಗಳು ಹೋಗುವುದು ಕಾಮನ್. ಆದರೆ, ಈ ಅಭಿಮಾನಿ ನೀಡಿರೋ ಗಿಫ್ಟ್ ವಿಶೇಷವಾಗಿದೆ.

‘ಕನ್ನಡ ಕಲಾ ಕುಲ ತಿಲಕ’ಅಭಿಮಾನಿಗಳು ದರ್ಶನ್‌ಗೆ ಉಡುಗೊರೆಯಾಗಿ ನೀಡಿರುವ ಫೋಟೋವನ್ನು ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಣ್ಣ ಮರದ ಪೀಸಿನಲ್ಲಿ ದರ್ಶನ್ ಮುಖವನ್ನು ಅದ್ಭುತವಾಗಿ ಕೆತ್ತಿರೋ ಉಡುಗೊರೆಯನ್ನು ನೀಡಲಾಗಿದೆ. ಕೇವಲ ಕೈ ಬೆರಳಿನ ಗಾತ್ರದಷ್ಟಿರುವ ಈ ಮರದ ತುಂಡನ್ನು ಗಾಜಿನಿಂದ ಮುಚ್ಚಲಾಗಿದೆ. ಒಟ್ಟಾರೆ ಅಂಗೈನಷ್ಟು ದೊಡ್ಡದಾಗಿದ್ದು, ಕಂದು ಬಣ್ಣದಲ್ಲಿದೆ.

ಇಂಥ ಅದ್ಭುತವಾದ ಕಲಾಸೃಷ್ಟಿಯನ್ನು ಉಡುಗೊರೆಯಾಗಿ ನೀಡಿದವರು ಆ್ಯಕ್ಟರ್ ಕಮ್ ದಾಸನ ಅಭಿಮಾನಿ! ಒಬ್ಬ ನಟ ಮತ್ತೊಬ್ಬ ನಟನಿಗೆ ಅಭಿಮಾನಿಯಾಗಿರುವುದು ಕಡಿಮೆ. ಆದರೆ, ಈ ಅಭಿಮಾನಿ ತನ್ನ ಪ್ರೀತಿ, ಅಭಿಮಾನವನ್ನು ಕಲಾವಿದನ ಕೈ ಚಳಕವಿರೋ ಕಲೆಯನ್ನು ಉಡುಗೊರೆಯನ್ನಾಗಿ ಕೊಡೋ ಮೂಲಕ ಎಕ್ಸ್‌ಪ್ರೆಸ್ ಮಾಡಿದ್ದಾನೆ. ಅಷ್ಟಕ್ಕೂ ಯಾರೀತ?

‘ಗಾಂಚಲಿ’ ಸಿನಿಮಾ ನಟ ಆದರ್ಶ್. ದರ್ಶನ್ ಗಿಫ್ಟ್ ನೀಡುವಾಗಿನ ಫೋಟೋ ತೆಗೆದುಕೊಂಡಿದ್ದಾರೆ. ಕೊಟ್ಟಿದ್ದು ಆದರ್ಶ್. ಆದರೆ ಈ ಕಲಾಕೃತಿ ಯಾರದ್ದೆಂದು ಎಲ್ಲಿಯೂ ರಿವೀಲ್ ಆಗಿಲ್ಲ.