'ಕುರುಕ್ಷೇತ್ರ'ದ ಹಿಟ್‌ನಲ್ಲಿ 'ರಾಬರ್ಟ್‌' ಶೂಟಿಂಗ್‌ ಶುರು ಮಾಡಿದ ಶಾಲೆಂಜಿಂಗ್‌ ಸ್ಟಾರ್ ದರ್ಶನ್‌ ಸದ್ದಿಲ್ಲದೆ 'ಒಡೆಯ' ಚಿತ್ರಕ್ಕೂ ಗಮನಹರಿಸಿದ್ದಾರೆ.

'ನಮ್ಮೂರ ದಸರಾ ಎಷ್ಟೊಂದು ಸುಂದರ' ಎಂದು ಹೇಳಿತ್ತಾ ದರ್ಶನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರ ಅಫೀಶಿಯಲ್ ಲುಕ್‌ ರಿವೀಲ್ ಮಾಡಿದ್ದಾರೆ.

ಡ್ಯಾನ್ಸ್ ಮಾಡ್ತಾ ಮಾಡ್ತಾ ಟಾಪ್ ಲೆಸ್ ಆದ ದರ್ಶನ್ ಐರಾವತ ನಟಿ

'ಸರ್ವರಿಗೂ ಆಯುಧ ಪೂಜೆ ಮತ್ತು ವಿಜಯದಶಮಿಯ ಹಾರ್ಧಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯ ಕೃಷೆ ಸದಾ ಎಲ್ಲರ ಮೇಲಿರಲಿ, ನಮ್ಮೂರ ದಸರಾ ಎಷ್ಟೊಂದು ಸುಂದರ' ಎಂದು ಫೋಟೋದೊಂದಿಗೆ ಟ್ಟೀಟ್‌ ಮಾಡಿದ್ದಾರೆ. ಈ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಅಭಿಮಾನಿಗಳು ಪುಟ್ಟ ಮಗು ಎತ್ತಿ ಆಡಿಸುತ್ತಿರುವ ದರ್ಶನ್‌ ಫೋಟೋ ತೆಗೆದು ಪೋಸ್ಟರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.

 

 

ಹಬ್ಬ ದನ ಹಾಗೂ ವಿಶೇಷ ದಿನಗಳಲ್ಲಿ ದರ್ಶನ್ ಡಿಫರೆಂಟ್‌ ಲುಕ್‌ ರಿವೀಲ್ ಮಾಡುವ ಮೊಲಕ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸಂದೇಶ್ ನಾಗರಾಜ್‌ ನಿರ್ಮಾಣದ, ಎಂ ಡಿ ಶ್ರೀಧರ್ ನಿರ್ದೇಶನದ ಸಿನಿಮಾ ಇದಾಗಿದ್ದು ರಾಗವಿ ದರ್ಶನ್‌ಗೆ ಜೋಡಿಯಾಗಿ ಮಿಂಚಿದ್ದಾರೆ. 'ಒಡೆಯ' ಚಿತ್ರವೂ 'ವೀರಂ' ಚಿತ್ರದ ರಿಮೇಕ್ ಎಂದು ಹೇಳಲಾಗಿದೆ.

ಇನ್ನು ಕೆಲ ದಿನಗಳ ಹಿಂದೆ ದರ್ಶನ್ ಕೀನ್ಯಾದಲ್ಲಿ ಕಾಣಿಸಿಕೊಂಡಿದ್ದು ಕಾಡಿನ ಜನರೊಂದಿಗೆ ಕುಣಿದು ಸಂಭ್ರಮಿಸಿದ ವಿಡಿಯೋವನ್ನು ಟೀಂ ರಿಲೀಸ್ ಮಾಡಿತ್ತು.