ನಟ ಅರ್ಜುನ್ ಯೋಗಿ ಅವರು ಅಕ್ಕ ಸೀರಿಯಲ್ (2012) ಸೇರಿದಂತೆ ಹಲವಾರು ಸೀರಿಯಲ್‌ಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಸಹ ನಟಿಸಿರುವ ನಟ ಅರ್ಜುನ್ ಯೋಗಿ ಅವರು ಸಿನಿಮಾರಂಗ ಹಾಗೂ ಕಿರುತೆರೆ ಈ ಎರಡರಲ್ಲೂ ಬ್ಯುಸಿ ಆಗಿದ್ದಾರೆ.

ಕನ್ನಡ ಸಿನಿಮಾ (Sandalwood) ಹಾಗೂ ಸೀರಿಯಲ್ (TV) ನಟ ಅರ್ಜುನ್ ಯೋಗಿ ಅವರು ಚಲಿಸುತಿದ್ದ ಕಾರು ಅಪಘಾತವಾಗಿದೆ. ಸ್ನೇಹಿತರ ಜೊತೆ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗುವಾಗ ಆರ್.ಆರ್. ನಗರ ಚನ್ನಸಂದ್ರ ಬಳಿ ಅಪಘಾತ ಆಗಿದೆ. ಅವರು ಹೋಗುತ್ತಿದ್ದ ಮಾರ್ಗದಲ್ಲಿ ಕಾರಿಗೆ ಬೀದಿ ನಾಯಿಗಳ ಹಿಂಡು ಅಡ್ಡ ಬಂದಿದ್ದು, ಅವುಗಳನ್ನು ತಪ್ಪಿಸಲು ಹೋಗಿ ಇವರ ಕಾರು ಅಫಘಾತಕ್ಕೆ ಈಡಾಗಿದೆ ಎನ್ನಲಾಗಿದೆ.

ನಾಯಿಗಳನ್ನ ತಪಿಸಲು ಹೋದ ನಟ ಅರ್ಜುನ್ ಯೋಗಿ ಅವರ ಕಾರು ರಸ್ತೆ ಬದಿ ಇದ್ದ ಫುಟ್‌ಪಾತ್ ಮೇಲಿನ ಕಂಬಕ್ಕೆ ಗುದ್ದಿದೆ. ಏರ್ ಬ್ಯಾಗ್ ಇದ್ದ ಕಾರಣ ನಟ ಅರ್ಜುನ್ ಯೋಗಿ ಹಾಗೂ ಸ್ನೇಹಿತರು ಅಪಾಯದಿಂದ ಪಾರಾಗಿದ್ದಾರೆ.

ನಟ ಅರ್ಜುನ್ ಯೋಗಿ ಅವರು ಅಕ್ಕ ಸೀರಿಯಲ್ (2012) ಸೇರಿದಂತೆ ಹಲವಾರು ಸೀರಿಯಲ್‌ಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಸಹ ನಟಿಸಿರುವ ನಟ ಅರ್ಜುನ್ ಯೋಗಿ ಅವರು ಸಿನಿಮಾರಂಗ ಹಾಗೂ ಕಿರುತೆರೆ ಈ ಎರಡರಲ್ಲೂ ಬ್ಯುಸಿ ಅಗಿದ್ದಾರೆ. ಸದ್ಯ ಅಪಘಾತದಲ್ಲಿ ಅಪಾಯದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ.

ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಟ ಅರ್ಜುನ್ ಯೋಗಿ ಅವರು ಡಾನ್ಸ್ ರಿಯಾಲಿಟಿ ಶೋದಲ್ಲಿ ಕೂಡ ಮಿಂಚಿದ್ದಾರೆ. ಸೀರಿಯಲ್‌ ಕ್ಷೇತ್ರದಲ್ಲೂ ಕೂಡ ಫೇಮಸ್ ಫೇಸ್ ಆಗಿರುವ ನಟ ಅರ್ಜುನ್ ಯೋಗಿ ಅವರು ಸದ್ಯ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ.