ಸ್ಯಾಂಡಲ್ವುಡ್ ಕ್ವೀನ್  ರಮ್ಯಾ ಸಕ್ಕರೆ ತಿನ್ನುವುದನ್ನು ತ್ಯಜಿಸಿದ್ದಾರಂತೆ. ಸಕ್ಕರೆ ನಾಡಿನ ಈ ಹುಡುಗಿ ಸಕ್ಕರೆ ಬಿಟ್ಟಿದ್ಯಾಕೆ ಎನ್ನೋ ಪ್ರಶ್ನಗೆ ಇಲ್ಲಿದೆ ನೋಡಿ ಆನ್ಸರ್.

ಬೆಂಗಳೂರು : ಮೂಲತಃ ಮಂಡ್ಯದ ಬೆಡಗಿಯಾಗಿರುವ ಇವರಿಗೆ ರಮ್ಯಾಗೆ ಸಕ್ಕರೆ ಬಯಕೆ ಜಾಸ್ತಿ. ಜೀವನದಲ್ಲಿ ಖುಷಿ ಮತ್ತು ಒತ್ತಡಕ್ಕೆ ಇವರ ಬಳಿ ಇರೋದು ಒಂದೆ ಪರಿಹಾರ. ಅದೇನೆಂದರೆ ಸಕ್ಕರೆ ತಿನ್ನುವುದಂತೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಲವು ವರ್ಷಗಳಿಂದ ಪ್ರಯತ್ನ ಮಾಡಿ ಮಾಡಿ ವಿಫಲರಾಗಿದ್ದಾರೆ. ಆದರೆ ಈ ಸಲ #ನೋಶುಗರ್ ಚಾಲೆಂಜ್ ತೆಗೆದುಕೊಂಡಿದ್ದಾರೆ. ಅವರ ಆರೋಗ್ಯದ ಮೇಲೆ ಹೆಚ್ಚು ಕೆಟ್ಟ ಪರಿಣಾಮ ಬೀರುತ್ತಿರುವ ಕಾರಣ ಅವರು ಸಕ್ಕರೆ ತಿನ್ನಬಾರದೆನ್ನುವ ತಿರ್ಮಾನ ಮಾಡಿದ್ದಾರೆ. 

ಈ ಹಿಂದೆ ಅನೇಕ ಸಲ ಇಂತಹ ಪ್ರಯತ್ನ ಮಾಡಿ 2-3 ದಿನಕ್ಕೆ ಬ್ರೇಕ್ ಮಾಡಿದ್ರು. ಆದ್ರೆ ಈ ಬಾರಿ ಮಾತ್ರ ಸೀರಿಯಸ್ ಆಗಿ ಚಾಲೇಂಜ್ ಸ್ವೀಕಾರ ಮಾಡಿದ್ದು, ಅಡಿಕ್ಷನ್ ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಕಳೆದ ಡಿಸೆಂಬರ್ 31ರಿಂದಲೇ ಅವರ ಈ ಚಾಲೇಂಜ್ ಆರಂಭವಾಗಿದೆ.