ಸಿನಿಮಾ ಬಿಟ್ಟು ಆರ್‌ಜೆಯಾದ ನಟಿ ಮಾನ್ವಿತಾ ಹರೀಶ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Aug 2018, 2:52 PM IST
Sandalwood Actress Manvitha Harish Became BBC RJ London
Highlights

ಮಾನ್ವಿತಾ ಹರೀಶ್ ತಮ್ಮ ಸಿನಿಮಾ ಬದುಕಿಗೆ ವಿದಾಯ ಹೇಳಿ ಮತ್ತೆ ಆರ್ ಜೆ ಯಾಗಿ ಕೆಲಸ ಶುರುಮಾಡಿದ್ದಾರೆ. ಅರೆ ಇದೇನಿದು? ಉದಯೋನ್ಮುಖ ನಟಿಗೆ ಅವಕಾಶಗಳ ಕೊರತೆಯಾಯಿತಾ? ಕೆಂಡಸಂಪಿಗೆಯ ಸುಂದರಿ ಮಾನ್ವಿತಾ ಹರೀಶ್ ಒಂದು ಕಾಲದಲ್ಲಿ ಆರ್ ಜೆ ಆಗಿ ಕೆಲಸ ಮಾಡಿದ್ದವರು ಎನ್ನೋದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ. ಅರೆ ಇದೇನಪ್ಪಾ ಸುದ್ದಿ ಅಂತೀರಾ ಮುಂದೆ ಓದಿ...

ನಟಿ ಮಾನ್ವಿತಾ ಹರೀಶ್ ಹೊಸ ದಾಖಲೆ ಬರೆದಿದ್ದಾರೆ. , ಲಂಡನ್ ಬಿಬಿಸಿ ರೇಡಿಯೋಗೆ ಸಂದರ್ಶನ ನೀಡಿದ ಮೊದಲ ಕನ್ನಡದ ನಟಿಯೆಂಬ ಖ್ಯಾತಿಯನ್ನೂ ಮಾನ್ವಿತಾ ಪಡೆದುಕೊಂಡಿದ್ದಾರೆ.ಹಿಂದೆ ಮಂಗಳೂರಿನಲ್ಲಿ ರೇಡಿಯೋ ಮಿರ್ಚಿ 98.3 ಸ್ಟೇಷನ್​ನಲ್ಲಿ ಕಿಲಾಡಿ ಕಾರ್ಯಕ್ರಮವನ್ನು ಮಾನ್ವಿತಾ ನಡೆಸುತ್ತಿದ್ದರು.

ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ಯಲ್ಲಿ ಅವಕಾಶ ಪಡೆದುಕೊಂಡು ಕನ್ನಡಿಗರ ಮನ ಗೆದ್ದಿದ್ದರು. ಈ ವರ್ಷದ ಯಶಸ್ವಿ ಚಿತ್ರ ‘ಟಗರು’ದಲ್ಲಿ ಅಭಿನಯಿಸಿ ಮನ ಗೆದ್ದಿದ್ದರು.

ಶೂಟಿಂಗ್ ಸಲುವಾಗಿಯೇ ಲಂಡನ್​ನಲ್ಲಿ ನಾಗತಿಹಳ್ಳಿ ಚಿತ್ರ ತಂಡದೊಂದಿಗೆ ಇರುವ ಮಾನ್ವಿತಾ ಸಂದರ್ಶನ ನೀಡಿದ್ದಾರೆ. ನಟ ವಶಿಷ್ಟ ಸಿಂಹ ಹಾಗೂ ನಟಿ ಮಾನ್ವಿತಾ ಹರೀಶ್ ಹಾಡುತ್ತಾ ಬಕಿಂಗ್ ಹ್ಯಾಮ್ ಪ್ಯಾಲೇಸ್ ಎದುರು ಹಾಡಿಕುಣಿದದಿದ್ದು ಸುದ್ದಿಯಾಗಿತ್ತು.

loader