Asianet Suvarna News Asianet Suvarna News

#MeToo ಗೆ ಉಲ್ಟಾ ಹೊಡೆದ ಹರ್ಷಿಕಾ ಪೂಣಚ್ಚ

#MeToo ಅಭಿಯಾನವನ್ನು ನಟಿ ಹರ್ಷಿಕಾ ಪೂಣಚ್ಚ ಖಂಡಿಸಿದ್ದಾರೆ | ಮೀಟೂಗೆ ಉಲ್ಟಾ ಹೊಡೆದಿದ್ದಾರೆ ಹರ್ಷಿಕಾ ಪೂಣಚ್ಚ |  

Sandalwood actress Harshika Poonaccha counter attack to #MeToo
Author
Bengaluru, First Published Oct 24, 2018, 3:06 PM IST
  • Facebook
  • Twitter
  • Whatsapp

ಬೆಂಗಳೂರು (ಅ. 24): ಪ್ರಸಿದ್ಧಿಗಾಗಿ ಮೀಟೂ ಅಭಿಯಾನವನ್ನು ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಬಲವಾಗಿ ವಿರೋಧಿಸಿದ್ದಾರೆ. ಅನ್ನ ಕೊಟ್ಟಿರುವ ಚಿತ್ರರಂಗಕ್ಕೆ ಕೆಲವರು ಪ್ರಸಿದ್ಧಿಗಾಗಿ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ದೂರಿದ್ದಾರೆ.

ಆ್ಯಕ್ಟಿವಿಸ್ಟ್ ನಟಿಯರು ಆರಂಭದಲ್ಲಿ ದುಡ್ಡಿಗಾಗಿ, ಅವಕಾಶಕ್ಕಾಗಿ ಅನೇಕರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಈಗ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 

  •  ಯಾವ ಪುರುಷನೂ ಯಾವ ಮಹಿಳೆಗೂ ಕಿರುಕುಳ ನೀಡಬಾರದು, ಆಕೆಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುವಂತೆ ಬಲವಂತ ಮಾಡಬಾರದು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಕೆಲವು ನಟಿಯರು ಮಹಿಳಾಪರ ವಾದವನ್ನು ತಮ್ಮ ಪ್ರಸಿದ್ಧಿಗಾಗಿ ಬಳಸಿಕೊಳ್ಳುತ್ತಿರುವುದನ್ನು ನೋಡಿ ರೋಸಿಹೋಗಿದ್ದೇನೆ.
  •  ಒಬ್ಬ ವ್ಯಕ್ತಿ 15-20 ವರ್ಷ ತುಂಬಾ ಕಷ್ಟ ಪಟ್ಟು ಕಟ್ಟಿದ ಜೀವನವನ್ನು ಒಂದೇ ಒಂದೇ ಸ್ಟೇಟ್‌ಮೆಂಟ್‌ನಿಂದ ಹಾಳು ಮಾಡುವುದನ್ನು ಬಲವಾಗಿ ವಿರೋಧಿಸುತ್ತಿದ್ದೇನೆ. ಆ ವ್ಯಕ್ತಿಯ ಪತ್ನಿ, ಮಕ್ಕಳನ್ನು ಅವಮಾನಕ್ಕೆ ಒಳಗಾಗುವುದನ್ನು ನಾನು ಒಪ್ಪುವುದಿಲ್ಲ.
  • ನಾನು ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಎಲ್ಲವನ್ನೂ ಕಣ್ಣಾರೆ ಕಂಡಿದ್ದೇನೆ. ಅನೇಕ ಈ ಆ್ಯಕ್ಟಿವಿಸ್ಟ್ ನಟಿಯರು ಆರಂಭದ ದಿನಗಳಲ್ಲಿ ತಮಗೆ ಅಗತ್ಯವಿದ್ದಾಗ ದುಡ್ಡಿಗಾಗಿ, ಒಳ್ಳೆಯ ಸಿನಿಮಾದ ಅವಕಾಶಕ್ಕಾಗಿ, ಅದ್ಧೂರಿ ಬದುಕನ್ನು ನಡೆಸುವುದಕ್ಕಾಗಿ ಎಲ್ಲಾ ಸ್ವಾತಂತ್ರ್ಯಗಳನ್ನು ನೀಡಿ ಈಗ ಪ್ರಸಿದ್ಧಿ ಪಡೆಯಲು ಅವರನ್ನೇ ದೂರುತ್ತಿದ್ದಾರೆ. ಒಂದು ಕಾಲದಲ್ಲಿ ಯಾರ ಜೊತೆ ನಗುತ್ತಾ ಕೈ ಕೈ ಹಿಡಿದುಕೊಂಡು ಸಾಗುತ್ತಿದ್ದರೋ ಅವರ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ.

 

ಇವು ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಮೀಟೂ ಅಭಿಯಾನದ ವಿರುದ್ಧ ಸಿಡಿದು ಬಿದ್ದು ಆಡಿರುವ ಮಾತುಗಳು. ಮಹಿಳೆಯರಿಗೆ ನಿಜವಾಗಿಯೂ ಕಿರುಕುಳ ನೀಡಿದವರ ವಿರುದ್ಧ ಹೋರಾಟ ಮಾಡುವುದನ್ನು ಸಮರ್ಥಿಸಿಕೊಂಡಿರುವ ಹರ್ಷಿಕಾ, ಪ್ರಸಿದ್ಧಿಗಾಗಿ ಸುಳ್ಳುಸುಳ್ಳೇ ಮೀ ಟೂ ಆರೋಪ ಮಾಡಿರುವವರ ವಿರುದ್ಧ ಭಾರಿ ಸಿಟ್ಟು ಮಾಡಿಕೊಂಡಿದ್ದಾರೆ. ಕೆಲವು ಆ್ಯಕ್ಟಿವಿಸ್ಟ್ ನಟಿಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಆರಂಭದ ಹಂತದಲ್ಲಿ ಎಲ್ಲಕ್ಕೂ ಹೊಂದಾಣಿಕೆ ಮಾಡಿಕೊಂಡು, ಈಗ ತಾನು ಜಗತ್ತಿನ ಮಹಿಳೆಯರನ್ನು ಕಾಪಾಡುವ ಪೋಸ್ ಕೊಡುತ್ತಿರುವವರನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದು ಹೋರಾಟದ ಸರಿಯಾದ ವಿಧಾನವಲ್ಲ ಎಂದಿದ್ದಾರೆ. ಹರ್ಷಿಕಾ ಪೂಣಚ್ಚ ಈ ಮಾತುಗಳು ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ತಾವು ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವ ಪತ್ರದಲ್ಲಿ ಕೆಲವು ಘಟನೆಗಳನ್ನು ಹೇಳಿರುವ ಅವರು ಯಾವುದೇ ನಟಿಯ ಹೆಸರನ್ನು ಬಹಿರಂಗಪಡಿಸಿಲ್ಲ.

ನಟಿಯಾಗಿರುವ ನನ್ನನ್ನೂ ಕೆಲವರು ಫೇವರ್‌ಗಳನ್ನು ಕೇಳಿದ್ದಾರೆ. ಆದರೆ ತಾನು ತುಂಬಾ ಸ್ಪಷ್ಟವಾಗಿ ಅವರ ಮಾತುಗಳನ್ನು ತಿರಸ್ಕರಿಸಿದ್ದೇನೆ. ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿರುವ ನನ್ನ ವಿರುದ್ಧ ಯಾರೊಬ್ಬರೂ ಬೆರಳು ತೋರಿಸುವಂತೆ ನಾನು ಬದುಕಿಲ್ಲ. ತುಂಬಾ ಸ್ವಚ್ಛವಾಗಿ ಬದುಕಿದ್ದೇನೆ. ನನ್ನ ನೇರವಂತಿಕೆಯಿಂದ ಸೂಪರ್‌ಸ್ಟಾರ್‌ಗಳ ಜೊತೆಗೆ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅವಕಾಶದಿಂದ ನಾನು ವಂಚಿತಳಾಗಿರಬಹುದು. ಆದರೆ ನಾನೊಬ್ಬಳು ಹ್ಯಾಪಿ ಪರ್ಸನ್.

ಈಗಲೂ ಚಿತ್ರರಂಗದ ಎಲ್ಲರ ಜೊತೆ ಒಳ್ಳೆಯ ಸಂಬಂಧ ಇರಿಸಿಕೊಂಡಿದ್ದೇನೆ ಎಂದು ಹರ್ಷಿಕಾ ಹೇಳಿದ್ದಾರೆ. ನನ್ನ ಮಾತುಗಳನ್ನು ಕೆಲವರು ವಿರೋಧಿಸಬಹುದು. ಆದರೆ ಸತ್ಯ ಸತ್ಯವೇ. ಕೆಲವು ಪುರುಷರು ಕೆಟ್ಟವರಾಗಿದ್ದು, ಅವರ ಇಚ್ಛೆಗೆ ತಕ್ಕಂತೆ ವರ್ತಿಸಲು ನಟಿಯರನ್ನು ಬಲವಂತ ಮಾಡಬಹುದು. ಆದರೆ ಯಾರೂ ಅತ್ಯಾಚಾರ ಮಾಡುವುದಿಲ್ಲ. ಮೃಗಗಳಂತೆ ವರ್ತಿಸುವುದಿಲ್ಲ. ನಟಿಯರು ನಿರ್ಭಿಡೆಯಿಂದ ನೋ ಎಂದು ಸ್ಪಷ್ಟವಾಗಿ ಹೇಳಿ ಅಲ್ಲಿಂದ ಎದ್ದು ನಡೆಯುವ ಸ್ವಾತಂತ್ರ್ಯ ಎಲ್ಲರಿಗೂ ಇದ್ದೇ ಇದೆ.

ಎರಡು ಕೈ ಇದ್ದರೇನೇ ಚಪ್ಪಾಳೆ ಅನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದಿರುವ ಹರ್ಷಿಕಾ ಎಲ್ಲಾ ಆ್ಯಕ್ಟಿವಿಸ್ಟ್ ನಟಿಯರಲ್ಲಿ ಸತ್ಯವಾಗಿ ವರ್ತಿಸಬೇಕು ಎಂದು ಕೇಳಿಕೊಂಡಿದ್ದಾರೆ. 

Follow Us:
Download App:
  • android
  • ios