Asianet Suvarna News Asianet Suvarna News

ಭಟ್ಟರ ‘ಮನೆಗೋಗಲ್ಲ’ ಹಾಡು ಕೇಳಿ ಸ್ಯಾಂಡಲ್‌ವುಡ್ ಹೀರೋಗಳು ಏನಂದ್ರು?

‘ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು‘ ಅಂಥ ಬರೆದ ಹಾಡು ಕುಡುಕರೆಲ್ಲರ ರಾಷ್ಟ್ರೀಗೀತೆಯಾಗಿತ್ತು. ಈಗ ಅದೇ ಕಾಂಬಿನೇಶನ್ ಮತ್ತೆ ಬಂದಿದ್ದು ‘ನಾವ್ ಮನೆಗೆ ಹೋಗೋದಿಲ್ಲ‘ ಅಂಥ ಹಾಡ್ತಿದೆ. ನಿನ್ನೆಯಷ್ಟೆ ಬಿಡುಗಡೆಯಾಗಿರುವ ವಿಕ್ಟರಿ-2 ಸಿನಿಮಾದ ಹಾಡು ಹತ್ತಿರ 5 ಲಕ್ಷ ವೀವ್ಸ್ ಪಡೆದುಕೊಂಡಿದೆ.

Sandalwood actors give a thumbs up to new song from Victory 2 Yogaraj Bhat
Author
Bengaluru, First Published Oct 15, 2018, 9:34 PM IST

 'ನಾವು ಮನೆಗ್ ಹೋಗೋದಿಲ್ಲಾ…ನಮ್ಗೆ ಬಾಗಿಲು ತೆಗಿಯೋರಿಲ್ಲಾ.' ಅಂತ ಕುಡುಕ ಗಂಡರಿಗೆ ಅಂತಾನೇ ಬರೆದಿರುವ ಯೋಗರಾಜ್ ಭಟ್ಟರ ಸಾಹಿತ್ಯ ಜನಮೆಚ್ಚುಗೆ ಗಳಿಸುತ್ತಿದೆ. ಹೆಂಡಿರ ಮಕ್ಕಳ ಯೋಚನೆ ಮಾಡೋಕೆ ಬಾರಿಗೆ ಬಂದರೆ ತಪ್ಪೇನಿದೆ, ಮನೆಗೆ ಬನ್ನಿ ನೋಡ್ಕೋತಿನಿ ಅಂತೀರಾ ನಾವೇನ್ ಮನೆ ಕಟ್ಸಿಲ್ವಾ ತಿಂಗಳ ಈ.ಎಂ.ಐ ಕಟ್ಟಲ್ವಾ? ಎಂದೆಲ್ಲಾ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಡಿನಲ್ಲಿದೆ. ಹೆಂಡತಿಯನ್ನೇ ಉದ್ದೇಶಿಸಿ ಭಟ್ಟರು ಹಾಡು ಬರೆದಂತಿದೆ.

ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದು ,ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸ್ಯಾಂಡಲ್ ವುಡ್ ನ ಬಹುತೇಕ ಹೀರೋಗಳು ಹಾಡು ಕೇಳಿ ಮೆಚ್ಚುಗೆ ಸೂಚಿಸಿದ್ದಾರೆ. 'ರಾಂಬೋ 2' ಚಿತ್ರ ಯಶಸ್ವಿಯಾದ ನಂತರ ಶರಣ್  'ವಿಕ್ಟರಿ-2' ನಲ್ಲಿ ಕಾಣಿಸಿಕೊಳ್ಳುತ್ತಿದ್ದು  ನಾಯಕಿಯರಾಗಿ ಅಪೂರ್ವ , ಆಸ್ಮಿತಾ ಸೂದ್ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲಾ ಮತ್ತು ರವಿಶಂಕರ್ ಬಲ ಕೂಡ ಚಿತ್ರಕ್ಕಿದೆ. ನೀವು ಒಮ್ಮೆ ಹಾಡು ಕೇಳಿಕೊಂಡು ಬನ್ನಿ.....

Follow Us:
Download App:
  • android
  • ios