ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಸ್ಯಾಂಡಲ್ ವುಡ್ ‘ದಿಲ್‌ವಾಲಾ’

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Nov 2018, 12:01 PM IST
Sandalwood actor sumanth shailendra to marry anitha in december
Highlights

ಕನ್ನಡ ಚಿತ್ರ ರಂಗದಲ್ಲಿ ಇದೀಗ ಒಂದಾದ ಮೇಲೆಂದು ಸಿಹಿ ಸುದ್ದಿ ಕೇಳಿಬರುತ್ತಿದೆ. ‘ಆಟ’ ವಾಡಿಕೊಂಡು ‘ದಿಲ್ ವಾಲಾ’ನಾಗಿ ಈಗ ಮದುಮಗನಾಗಲು ಸ್ಯಾಂಡಲ್ ವುಡ್ ಸ್ಟಾರ್ ರೆಡಿಯಾಗಿದ್ದಾರೆ.

ದೂದ್ ಪೇಡಾ ದಿಗಂತ್ ಹಾಗೂ ಅ್ಯಂಡಿ ಮದುವೆಯ ವಿಚಾರ ಹಾಗು ದಿನಾಂಕ ಬಿಚ್ಚಿಟ್ಟಿದ್ದಾರೆ. ಈಗ ಅದೇ ದಿನ ಮತ್ತೊಬ್ಬ ನಟ ಮದುವೆಯಾಗುತ್ತಿದ್ದಾರೆ. ಯಾರಪ್ಪಾ ಅಂತಾನಾ?

ಆ ಮದು ಮಗ ಬೇರೆಯಾರಲ್ಲಾ ನಿರ್ಮಾಪಕ ಶೈಲೇಂದ್ರ ಬಾಬು ಮಗ ಸುಮಂತ್ ಶೈಲೇಂದ್ರ. ಕೆಲ ತಿಂಗಳ ಹಿಂದೆ ಅನಿತಾ ಎಂಬ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಡಿಸೆಂಬರ್ 11-12 ಬೆಂಗಳೂರಿನಲ್ಲಿ ಮದುವೆ ನಡೆಯಲಿದೆ. 11 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಆರತಕ್ಷತೆ ಹಾಗು 12 ಮುಹೂರ್ತ ನಡೆಯುತ್ತಿದೆ.

ಡಿಸಂಬರ್ ಸ್ಯಾಂಡಲ್ ವುಡ್ ಗೆ ಲಕ್ಕಿ ತಿಂಗಳು ಅನಿಸುತ್ತೆ ಯಾಕೆಂದರೆ ಒಂದು ಕಡೆ ಬಹು ನಿರಿಕ್ಷಿತ ಸಿನಿಮಾ ಕೆಜಿಫ್ ಬಿಡುಗಡೆಯಾದರೆ ಮತ್ತೊಂದು ಕಡೆ ಮಿನಿ ಯಶ್ ಬರುವ ಸಮಯ. ಇನ್ನೂ ಮದುವೆ ವಿಚಾರದಲ್ಲಿ ದಿಗ್ಗಿ- ಆ್ಯಂಡಿ ಮದುವೆ ಅದಾದ ಮೇಲೆ ಸುಮಂತ್ - ಅನಿತಾ ಮದುವೆ.

‘ಮನಸಾರೆ’ ಜೋಡಿಯ ಮನಸೋಲುವ ಲವ್ ಸ್ಟೋರಿ ಝಲಕ್!

loader