ನಟ ಶಿವರಾಜ್ ಕುಮಾರ್ ಸಕತ್ ಸ್ಟುಡಿಯೋದ ನೂತನ ಕಚೇರಿಯನ್ನು ಇತ್ತೀಚೆಗಷ್ಟೆ ಉದ್ಘಾಟಿಸಿದರು. ಬೆಂಗಳೂರಿನ ಜಯನಗರದಲ್ಲಿ ಆರಂಭಗೊಂಡಿದ್ದು, ಮುಂದೆ ಮತ್ತಷ್ಟು ವೆಬ್ ಸರಣಿ ಹಾಗೂ ಸಿನಿಮಾ ನಿರ್ಮಿಸುವ ಉದ್ದೇಶ ಈ ಸ್ಟುಡಿಯೋದ್ದು.

ನಟ ಸುನೀಲ್ ರಾವ್ ಅವರನ್ನು ಮತ್ತೆ ಪ್ರೇಕ್ಷಕರಿಗೆ ಪರಿಚಯಿಸಿದ ‘ಲೂಸ್ ಕನೆಕ್ಷನ್’ ಸಾಕಷ್ಟು ವೀಕ್ಷಕರನ್ನು ತನ್ನತ್ತ ಸೆಳೆದಿದ್ದು. ಇದರ ಜತೆಗೆ ‘ಡಾ ಪಾ ಜೋಶ್ಲೆ’ ಕೂಡ ಮೆಚ್ಚುಗೆಗೆ ಒಳಗಾಗಿತ್ತು. ಇದೇ ರೀತಿಯ ವೆಬ್ ಸರಣಿಗಳನ್ನು ಕನ್ನಡದಲ್ಲಿ ಮಾಡಬೇಕು ಎಂಬುದು ಸಕತ್ ಸ್ಟುಡಿಯೋದ ಮುಂದಿನ ಯೋಜನೆಗಳು. ಆರ್‌ಜೆ ಪ್ರದೀಪ್, ರವಿಶಂಕರ್, ಅಭಿನವ್ ವಿವೇಕ್ ಸಾರಥ್ಯದಲ್ಲಿ ಈ ಸ್ಟುಡಿಯೋ ಆರಂಭಗೊಂಡಿದೆ.

ದಾನೀಶ್ ಸೇಠ್‌ಗೆ ದಿಶಾ ಮದನ್ ಜೋಡಿ

ಅಂದಹಾಗೆ ಶ್ರೀಮುತ್ತು ಸಿನಿ ಸರ್ವೀಸ್ ಸಹಯೋಗದಲ್ಲಿ ಸಕತ್ ಸ್ಟುಡಿಯೋ ನಿರ್ಮಿಸುತ್ತಿರುವ ಮತ್ತೊಂದು ವೆಬ್ ಸರಣಿ ‘ಹೇಟ್ ಯೂ ರೋಮಿಯೋ’.