‘ಕವಲುದಾರಿ’, ‘ಮಾಯ ಬಜಾರ್’ ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ರೆಡಿ ಆಗಿವೆ. ಅದರ ಬೆನ್ನಲ್ಲೇ ಪನ್ನಗ ಭರಣ ನಿರ್ದೇಶನ ಹಾಗೂ ದಾನೀಶ್ ಸೇಠ್ ಅಭಿನಯದೊಂದಿಗೆ ಮೂರನೇ ಚಿತ್ರ ಶುರುವಾಗುತ್ತಿದೆ. ಸೋಮವಾರ ಅದರ ಸ್ಕ್ರಿಪ್ಟ್ ಪೂಜೆ ನೆರವೇರಿದೆ.

ಪುನೀತ್ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜನಯ್ಯ, ನಾಯಕ ನಟ ದಾನೀಶ್ ಸೇಠ್ ಇದ್ದರು. ‘ಹಂಬಲ್ ಪೊಲಿಟಿಷಿಯನ್ ನೋಗರಾಜ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಯಾದ ದಾನೀಶ್ ಸೇಠ್ ಈ ಚಿತ್ರದ ನಾಯಕ. ದಿಶಾ ಮದನ್ ನಾಯಕಿ. ಅವರಿಗಿದು ಮೊದಲ ಚಿತ್ರ. ಈಗಾಗಲೇ ಶಿವರಾಜ್ ಕುಮಾರ್ ನಿರ್ಮಾಣದ ‘ಹೇಟ್ ಯು ರೋಮಿಯೋ’ ವೆಬ್ ಸಿರೀಸ್‌ನಲ್ಲಿ ಅಭಿನಯಿಸಿದ್ದಾರೆ ದಿಶ್. ಫ್ರೆಂಚ್ ನಿವಾಸಿ ಬ್ರಿಟಿಷ್ ಮೂಲದ ಶಾಲಿ ಯುಸೂಫ್ ಕೂಡ ಚಿತ್ರದ ಮತ್ತೊಂದು ಪ್ರಮುಖ ಪಾತ್ರಧಾರಿ.

‘ಈ ಕತೆಯಲ್ಲಿ ಇರುವುದು ಇಬ್ಬರು ಆಟೋ ಡ್ರೈವರ್ಸ್. ಒಬ್ಬ ಫ್ರೆಂಚ್‌ನಿಂದ ಬಂದು ಬೆಂಗಳೂರಿನ ಶಿವಾಜಿ ನಗರದಲ್ಲಿ ಆಟೋ ಓಡಿಸುವವ. ಮತ್ತೊಬ್ಬ ಶಿವಾಜಿನಗರದಲ್ಲೇ ಇದ್ದು ಆಟೋ ಓಡಿಸುವವ ವ್ಯಕ್ತಿ. ಅವರಿಬ್ಬರ ನಡುವಿನ ಸ್ವಾರಸ್ಯಕರ ಕತೆಯೇ ಈ ಚಿತ್ರ’ ಎನ್ನುತ್ತಾರೆ ನಿರ್ದೇಶಕ ಪನ್ನಗಭರಣ.

‘ತುಂಬಾ ಫ್ರೆಶ್ ಕತೆ ಊಟಜ. ಅದೇ ಕಾರಣದಿಂದಲೇ ಪುನೀತ್ ರಾಜ್‌ಕುಮಾರ್ ಅವರು ಕತೆ ಒಪ್ಪಿಕೊಂಡು ಸಿನಿಮಾ ಮಾಡುವುದಾಗಿ ಹೇಳಿದರು. ಕತೆ ಕೇಳುವಾಗಲೇ ಅವರು ಬಿದ್ದು ಬಿದ್ದು ನಕ್ಕರು. ಚೆನ್ನಾಗಿ ಸಿನಿಮಾ ಮಾಡಿ ಅಂತ ಒಂದೇ ಮಾತಿನಲ್ಲಿ ಹೇಳಿಬಿಟ್ಟರು. ಅಲ್ಲಿಂದ ಶುರುವಾಯಿತು ಈ ಸಿನಿಮಾ ವರ್ಕ್. ಸದ್ಯ ಚಿತ್ರಕ್ಕೆ ಮೂವರು ಕಲಾವಿದರು ಮಾತ್ರ ಫೈನಲ್ ಆಗಿದ್ದಾರೆ. ಉಳಿದ ಪಾತ್ರಕ್ಕೆ ಕಲಾವಿದರ ಆಯ್ಕೆ ಈ ವಾರದಲ್ಲಿ ಫೈನಲ್ ಆಗುತ್ತೆ. ಆ ಮೇಲೆ ಚಿತ್ರೀಕರಣ ಶುರು’ ಎಂದರು ನಿರ್ದೇಶಕರು.