ಯುಎಸ್ಎ ಕಾರ್ಯಕ್ರಮದಲ್ಲಿ ಶಿವಣ್ಣ ಭಾಗಿಯಾಗಿದ್ರು. ಸದ್ಯ ಅಮೇರಿಕಾ ಪ್ರವಾಸದಲ್ಲಿರೋ ಶಿವಣ್ಣ ಅವರು ಅಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆನಂದ್ ರೂಪಾ..
ಕನ್ನಡದ ಎನರ್ಜಿಟಿಕ್ ನಟ ಶಿವರಾಜ್‌ಕುಮಾರ್ (Shivarajkumar) ಅವರು ಸದ್ಯ ಅಮೆರಿಕಾದಲ್ಲಿ(America)ಇದ್ದಾರೆ. ಕಾರಣ, ಅಲ್ಲಿ ಅವರ ಬಗ್ಗೆಯೇ ಬರೆದ 'ಶಿವಣ್ಣ' ಹೆಸರಿನ ಪುಸ್ತಕದ ಬಿಡುಗಡೆ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿ ಹಾಡು-ನೃತ್ಯದ ಮೂಲಕ ಬಹಳಷ್ಟು ಜನರನ್ನು ಕನ್ನಡ ನಟ ಶಿವಣ್ಣ ರಂಜಿಸಿದ್ದಾರೆ, ಈ ಕಾರ್ಯಕ್ರದ ಜೊತೆಗೆ, ಅಲ್ಲಿ ಅವರ ರೆಗ್ಯುಲರ್ ಚೆಕಪ್ ಸಹ ಇತ್ತು ಎನ್ನಲಾಗಿದೆ.
ಯುಎಸ್ಎ ಕಾರ್ಯಕ್ರಮದಲ್ಲಿ ಶಿವಣ್ಣ ಭಾಗಿಯಾಗಿದ್ರು. ಸದ್ಯ ಅಮೇರಿಕಾ ಪ್ರವಾಸದಲ್ಲಿರೋ ಶಿವಣ್ಣ ಅವರುಖಾಸಗಿ ಕಾರ್ಯಕ್ರಮದಲ್ಲಿ ಶಿವಣ್ಣ ಭಾಗಿಯಾಗಿದ್ದರು. ಆನಂದ್ ರೂಪಾ ಅನ್ನೋ ಬರಹಗಾರ್ತಿ 'ಶಿವಣ್ಣ' ಹೆಸರಿನ ಪುಸ್ತಕ ಬರೆದಿದ್ದಾರೆ. ಈ ಬುಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಭಾಗಿ ಆಗಿದ್ದಾರೆ. ನಟ ಶಿವಣ್ಣರ ಜೊತೆಗೆ ಅವರ ಪತ್ನಿ ಗೀತಾ, ಕುಟುಂಬಸ್ಥರು ಹಲವು ಸ್ನೇಹಿತರು ಕೂಡ ಭಾಗಿಯಾಗಿದ್ದಾರೆ.
ಶಿವಣ್ಣ ಪಸ್ತಕದ ರಿಲೀಸ್ ಕಾರ್ಯಕ್ರಮದಲ್ಲಿ ಹಾಡಿ ಕುಣಿದ ಶಿವರಾಜ್ ಕುಮಾರ್ ಅವರು, ನೆರೆದಿದ್ದ ಜನರನ್ನು ರಂಜಿಸಿದ್ದು ಮಾತ್ರವಲ್ಲದೇ ಈ ವೇಳೆ ಕೆಲವು ಮಾತುಗಳನ್ನು ಕೂಡ ಆಡಿದ್ದಾರೆ. ಅಲ್ಲಿರುವ ಹಲವು ಆಪ್ತರು ನಟ ಶಿವಣ್ಣ ಅವರನ್ನು ಆರೋಗ್ಯ ಸರಿಹೋದ ಮೇಲೆ ಮತ್ತೆ ನೋಡಿ ಖುಷಿ ಪಟ್ಟಿದ್ದಾರೆ ಎನ್ನಲಾಗಿದೆ. ತಮ್ಮನ್ನು ಅನಾರೋಗ್ಯದ ವೇಳೆ ನೋಡಿಕೊಂಡಿದ್ದ ಅಲ್ಲಿನ ವೈದ್ಯರು, ಸಿಬ್ಬಂದಿ ಎಲ್ಲರನ್ನೂ ನಟ ಶಿವಣ್ಣ ಹಾಗೂ ಪತ್ನಿ ಗೀತಾ ಮಾತನಾಡಿಸಿದ್ದಾರೆ. ನಟ ಶಿವರಾಜ್‌ಕುಮಾರ್ ಅವರನ್ನು ಮತ್ತೆ ಹೀಗೆ ಎನರ್ಜಿಟಿಕ್ ಆಗಿ ನೋಡಿ ಅವರೆಲ್ಲರೂ ಖುಷಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ನಟ ಶಿವಣ್ಣ ಅವರು ಸದ್ಯ ಕೆಲವು ಸಿನಿಮಾಗಳ ಶೂಟಿಂಗ್ನನಲ್ಲಿ ಭಾಗಿ ಆಗಬೇಕಿದೆ. ಅಮೆರಿಕಾ ಪ್ರವಾಸದಿಂದ ವಾಪಸ್ ಆದ ಬಳಿಕ, ನಟ ಶಿವಣ್ಣ ಅವರು ಒಂದೊಂದೇ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಸದ್ಯ ಕಮಲ್ ಹಾಸನ್ ಕನ್ನಡ ಅವಹೇಳನದ ವಿಷಯದಲ್ಲಿ ನಟ ಶಿವರಾಜ್‌ಕುಮಾರ್ ಹೆಸರು ಮುನ್ನೆಲೆಗೆ ಬಂದಿತ್ತು. ಸದ್ಯ, ನಟ ಕಮಲ್ ಹಾಸನ್ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗಿಲ್ಲ. ಸಿನಿಮಾ ಸೋತಿದೆ ಎಂಬ ಮಾಹಿತಿ ಕೂಡ ಇದೆ.
ಸುಪ್ರಿಂ ಕೋರ್ಟ್‌ನಲ್ಲಿ ನಟ ಕಮಲ್ ಹಾಸನ್ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಕಾರಣ, ಅವರ ಪರವಾದ ಅರ್ಜಿಯನ್ನು ಸುಪ್ರಿಂ ಕೋರ್ಟ್ ವಜಾ ಮಾಡಿದ್ದು, ನಿಮ್ಮದೇನಿದ್ದರೂ ಹೈ ಕೋರ್ಟ್‌ನಲ್ಲಿ ನೋಡಿಕೊಳ್ಳಿ' ಎಂದು ತಾಕೀತು ಮಾಡಿದೆ. ಕಮಲ್ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್, 'ನಿಮ್ಮ ಕೇಸ್‌ಅನ್ನು ತ್ವರಿತವಾಗಿ ವಿಚಾರಣೆ ಮಾಡಲು ಸಾಧ್ಯವಿಲ್ಲ' ಎಂದು ಹೇಳಿ ನ್ಯಾಯಮೂರ್ತಿ ಪಿ.ಕೆ. ಮಿಶ್ರಾ ತುರ್ತು ವಿಚಾರಣೆ ಗೆ ನಿರಾಕರಿಸಿದ್ದಾರೆ.
ಚಿತ್ರಮಂದಿರಗಳ ಮಾಲೀಕರ ಸಂಘ 'ಸುಪ್ರೀಂ ಕೋರ್ಟ್'ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ, ಇದೀಗ ಸುಪ್ರಿಂ ಕೋರ್ಟ್ 'ನೀವು ನಿಮ್ಮದೇನಿದ್ದರೂ ಅಲ್ಲಿಯೇ ನೋಡಿಕೊಳ್ಳಿ.. 'ಕರ್ನಾಟಕ ಹೈಕೋರ್ಟ್'ಗೆ ಹೋಗಿ ಎಂದಿದೆ. ಕಮಲ್ ಹಾಸನ್ ಅವರ ಪರವಾಗಿ 'ಥಗ್ ಲೈಫ್ ಚಿತ್ರದ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಬೆದರಿಕೆಗಳು ಬರುತ್ತಿವೆ' ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಹಾಗೇ, 'ತುರ್ತು ವಿಚಾರಣೆ ಮಾಡುವಂತೆ ಕೋರಲಾಗಿತ್ತು' ಆದರೆ ಈಗ ಎಲ್ಲವೂ ಅವರಿಗೇ ಉಲ್ಟಾ ಹೊಡೆದಿದೆ.
ಸುಪ್ರಿಂ ಕೋರ್ಟ್ ಇದೀಗ 'ಅರ್ಜಿದಾರರು ಹೈಕೋರ್ಟ್‌ಗೆ ಹೋಗಿ' ಎಂದು ಸೂಚಿಸಿದ್ದು, ಮುಂದಿನ ಹೆಜ್ಜೆ ಏನಿರಬಹದು ಎಂಬ ಕುತೂಹಲ ಮೂಡಿದೆ. ಕಾರಣ, ಕಮಲ್ ಹಾಸನ್ ನಟನೆ-ನಿರ್ಮಾಣದ 'ಥಗ್ ಲೈಫ್' ಸಿನಿಮಾ ತಮಿಳುನಾಡು ಸೇರಿದಂತೆ, ಬಿಡುಗಡೆಯಾಗಿರುವ ಎಲ್ಲಾ ಕಡೆ ನೀರಸ ಪ್ರದರ್ಶನ ಕಾಣುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೂರು ದಿನದ ಕಲೆಕ್ಷನ್ ಕೇವಲ 30 ಕೋಟಿ ಆಸುಪಾಸಿನಲ್ಲಿ ಓಡಾಡುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
