ಸುದೀಪ್ ಬಗ್ಗೆ ಶಿವಣ್ಣ ಅವರು ಹೀಗೆ ಹೇಳಲು, ತಮ್ಮಿಬ್ಬರ ಸಂಬಂಧದ ಬಗ್ಗೆ ಹೀಗೆ ಬಹಿರಂಗವಾಗಿ ಹೇಳಿಕೆ ನೀಡಲು ಕಾರಣವಾಗಿದ್ದೇ ಅದು. ಅವರಿಬ್ಬರ ಮಧ್ಯೆ ಮನಸ್ತಾಪ ಹಿಂದೊಮ್ಮೆ ಇತ್ತು..

ಸ್ಯಾಂಡಲ್‌ವುಡ್‌ನಲ್ಲಿ ನಟ ಶಿವರಾಜ್‌ಕುಮಾರ್ (Shivarajkumar) ಹಾಗೂ ಕಿಚ್ಚ ಸುದೀಪ್ (Kichcha Sudeep) ಈ ಇಬ್ಬರೂ ಸ್ಟಾರ್ ನಟರು. ಶಿವಣ್ಣ 1986 'ಆನಂದ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರೆ, ನಟ ಸುದೀಪ್ ಅವರು 1997 ರಲ್ಲಿ 'ತಾಯವ್ವ' ಸಿನಿಮಾ ಮೂಲಕ ಪದಾರ್ಪಣೆ ಮಾಡಿದ್ದಾರೆ. ಈ ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಬೆಳೆದು ಸ್ಟಾರ್ ನಟರು ಎನ್ನಿಸಿಕೊಂಡಿದ್ದಾರೆ. ಇಬ್ಬರಿಗೂ ಅವರದೇ ಆದ ಇಮೇಜ್‌ ಹಾಗೂ ಅಭಿಮಾನಿ ವರ್ಗ ಇದೆ. ಈ ಇಬ್ಬರೂ ಈಗ ಸಾಕಷ್ಟು ಅನ್ಯೋನ್ಯವಾಗಿದ್ದಾರೆ. ಇದಕ್ಕೂ ಮೊದಲು, ಅವರಿಬ್ಬರ ಮಧ್ಯೆ ಸಣ್ಣಪುಟ್ಟ ಮನಸ್ತಾಪ ಇತ್ತು ಎನ್ನಲಾಗುತ್ತಿತ್ತು. ಅದಕ್ಕೆ ನಟ ಶಿವಣ್ಣ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. 

ಹಾಗಿದ್ದರೆ ಶಿವಣ್ಣ ಈ ಬಗ್ಗೆ ಏನು ಹೇಳಿದ್ದಾರೆ? ಇಲ್ಲಿದೆ ನೋಡಿ.. ನಟ ಸುದೀಪ್‌ಗೆ ನನ್ನ ಮೇಲೆ ಪ್ರೀತಿ ಇದೆ, ಗೀತಕ್ಕನ ಮೇಲೆ ತುಂಬಾ ಗೌರವ ಇದೆ. ಕೆಲವು ಸಣ್ಣಪುಟ್ಟ ಮನಸ್ತಾಪಗಳು ಆಗುತ್ತವೆ. ಆದರೆ ನಮ್ಮಿಬ್ಬರಲ್ಲಿ ವೈರತ್ವ ಯಾವತ್ತೂ ಬೆಳೆದಿಲ್ಲ. ನನಗೆ ಡೈರೆಕ್ಷನ್ ಮಾಡ್ತೀನಿ ಅಂತಿದ್ರು, ಆದ್ರೆ ಇನ್ನೂ ಅದು ಸಾಧ್ಯವಾಗಲಿಲ್ಲ. ಅದಕ್ಕಾಗಿ 'ದಿ ವಿಲನ್' ಮಾಡಿದ್ದೇವೆ, ಕೆಸಿಸಿಯಲ್ಲಿ ಒಟ್ಟಿಗೇ ಆಡಿದ್ದೇವೆ. ಮನೆಗೆ ಬಂದಾಗ ಖುಷಿಯಿಂದ ಮಾತನ್ನಾಡುತ್ತಾರೆ. ನನ್ನ ಅನಾರೋಗ್ಯದ ಸಮಯದಲ್ಲಿ ಮನೆಗೆ ನೋಡೋಕೆ ಬಂದಾಗ ಭಾವುಕರಾದರು' ಎಂದಿದ್ದಾರೆ ನಟ ಶಿವಣ್ಣ. 

ಸುದೀಪ್ ಜೊತೆ ರೊಮಾನ್ಸ್ ಮಾಡೋಕೆ ಬಲಗಾಲಿಟ್ಟು ಬಂದೇ ಬಿಟ್ರಾ ಪೂಜಾ ಹೆಗ್ಡೆ..?!

ಹತ್ತು, ಗಲವು ವರ್ಷಗಳ ಹಿಂದೆ ನಟ ಸುದೀಪ್ ಹಾಗೂ ಶಿವಣ್ಣ ಮಧ್ಯೆ ಸಣ್ಣ ಪ್ರಮಾಣದಲ್ಲಿ ಮನಸ್ತಾಪ ಇತ್ತು ಎಂಬ ಸಂದೇಹ ಇತ್ತು. ಈ ಬಗ್ಗೆ ಕನ್ನಡ ಚಿತ್ರರಂಗ ಹಾಗೂ ಸಿನಿಪ್ರೇಮಿಗಳಿಗೂ ಗೊತ್ತಿತ್ತು. ಆದರೆ, ಅದು ಹೋಗಿದ್ದು ಯಾವಾಗ ಎಂಬುದು ಮಾತ್ರ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಏಕೆಂದರೆ, ನಮ್ಮಿಬ್ಬರ ಮಧ್ಯೆ ಯಾವುದೇ ಮನಸ್ತಾಪ ಈಗ ಇಲ್ಲ ಎಂದು ಶಿವಣ್ಣ ಅವರು ಬಹಿರಂಗವಾಗಿ ಹೇಳಿದ್ದು ತೀರಾ ಇತ್ತೀಚೆಗೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಟ ಸುದೀಪ್ ಹಾಗೂ ಶಿವಣ್ಣ ಫ್ಯಾಮಿಲಿ ಮಧ್ಯೆ ಯಾವುದೇ ಸಂಘರ್ಷ ಇಲ್ಲ ಎಂಬುದು ಎಲ್ಲರಿಗೂ ತಿಳಿದಿತ್ತು. ಏಕೆಂದರೆ, ಸುದೀಪ್-ಶಿವಣ್ಣ ಹಲವು ವರ್ಷಗಳಿಂದ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಸುದೀಪ್ ಬಗ್ಗೆ ಶಿವಣ್ಣ ಅವರು ಹೀಗೆ ಹೇಳಲು, ತಮ್ಮಿಬ್ಬರ ಸಂಬಂಧದ ಬಗ್ಗೆ ಹೀಗೆ ಬಹಿರಂಗವಾಗಿ ಹೇಳಿಕೆ ನೀಡಲು ಕಾರಣವಾಗಿದ್ದೇ ಅದು. ಅವರಿಬ್ಬರ ಮಧ್ಯೆ ಮನಸ್ತಾಪ ಹಿಂದೊಮ್ಮೆ ಇತ್ತು, ಈಗಿಲ್ಲ ಅನ್ನೋದು! ಅದಕ್ಕಾಗಿಯೇ ಈ ಕ್ಲಾರಫಿಕೇಶನ್. ಅಂದ್ರೆ ಶಿವಣ್ಣನ ಈ ಮಾತುಗಳು ಹಳೆಯ ಮನಸ್ತಾಪಕ್ಕೆ ಕ್ಲಾರಿಟಿಯೇ ಹೊರತೂ ಮತ್ತೇನಲ್ಲ. ಈಗ ಅವರಿಬ್ಬರ ಮಧ್ಯೆ, ಈ ಎರಡೂ ಕುಟುಂಬಗಳ ಮಧ್ಯೆ ಸಂಬಂಧ ಅತ್ಯತ್ತಮ ಎನ್ನುವ ಮಟ್ಟದಲ್ಲಿದೆ. ಶಿವಣ್ಣನ ಪತ್ನಿ ಗೀತಕ್ಕನ ಜೊತೆ ನಟ ಸುದೀಪ್ ಸಂಬಂಧ ಅತ್ಯುತ್ತಮವಾಗಿದೆ. ಗೀತಕ್ಕನಿಗೆ ಆಗಾಗ ಸುದೀಪ್ ಕಾಲ್ ಮಾಡಿ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಾ ಇರುತ್ತಾರೆ ಎಂಬುದು ಹಲವರಿಗೆ ಗೊತ್ತು, ಅದನ್ನು ನಟ ಸುದೀಪ್ ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿದ್ದಾರೆ. 

ವಿಜಯ್ ಸೇತುಪತಿ ಮಗ ಸೂರ್ಯನ ಸಿನಿಮಾಗೆ ಕಾಯ್ತಾ ಇದೀರಾ? ಬರ್ತಿದೆ ಈ ಡೇಟ್‌ಗೆ!

ಒಟ್ಟನಲ್ಲಿ ಹೇಳಬೇಕು ಎಂದರೆ, ನಟ ಸುದೀಪ್ ಹಾಗೂ ಶಿವಣ್ಣ ಸಂಬಂಧ ಈಗ ಅತ್ಯುತ್ತಮವಾಗಿದೆ. ಅಂದಹಾಗೆ, ಸದ್ಯಕ್ಕೆ ಅನೂಪ್ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಭಾಷ' ಸಿನಿಮಾದ ಚಿತ್ರೀಕರಣದಲ್ಲಿ ನಟ ಕಿಚ್ಚ ಸುದೀಪ್ ಬ್ಯುಸಿ ಆಗಿದ್ದಾರೆ. ಅತ್ತ ಶಿವಣ್ಣ ಅವರು 'ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊಟ್ಟಮೊದಲ ನಿರ್ದೇಶನದ '45' ಸಿನಿಮಾದ ಪ್ರಚಾರಕಾರ್ಯದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ಬ್ಯುಸಿ ಆಗಿದ್ದಾರೆ. ಜೊತೆಗೆ, ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ ಜತೆ ಕೂಲಿ ಹಾಗೂ ರಾಮ್‌ಚರಣ್ ನಟನೆಯ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಶಿವರಾಜ್‌ಕುಮಾರ್.