ಸ್ಯಾಂಡಲ್‌ವುಡ್ ನಿರ್ದೇಶಕ ಕಮ್ ನಟ ಶ್ರೀನಿವಾಸ್ ತನ್ನ ಗೆಳೆತಿ ಶೃತಿ ಜೊತೆ ಜೂನ್ 30 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶೃತಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಪರಿಚಯವಾಗಿ, ಆನಂತರ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿತ್ತು. ಕುಟುಂಬಸ್ಥರ ಒಪ್ಪಿಗೆ ಮೇಲೆ ಸಪ್ತಪದಿ ತುಳಿದಿದ್ದಾರೆ.

ಇನ್ನು ಚಿತ್ರರಂಗದಿಂದ ಹರಿಪ್ರಿಯಾ, ಉಪೇಂದ್ರ, ಶಿವರಾಜ್‌ಕುಮಾರ್ ಹಾಗೂ ಸಾಕಷ್ಟು ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ ಟ್ರೋಲ್ ಪೇಜ್‌ ಅಡ್ಮಿನ್ ಗಳೂ ಇವರ ಮದುವೆಯಲ್ಲಿ ಭಾಗಿಯಾಗಿದ್ದರು.

'ಟೋಪಿವಾಲ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಗೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ ಶ್ರೀನಿ ಶೃತಿ ಬರವಣಿಗೆಗೆ ಫುಲ್ ಫಿದಾ ಆಗಿದ್ದಾರೆ.

(ವಿಡಿಯೋ)ಶ್ರೀನಿವಾಸ ಕಲ್ಯಾಣದಲ್ಲಿ ಡಬ್ಬಲ್ ಮೀನಿಂಗೇ ಪ್ರಧಾನ: ಟ್ರೈಲರ್'ನಲ್ಲೂ ಕೇವಲ ಡಬ್ಬಲ್ ಮೀನಿಂಗ್!