ಶ್ರೀನಿವಾಸ ಕಲ್ಯಾಣ... ಇಂಥದ್ದೊಂದು ಶೀರ್ಷಿಕೆ ಹೊಂದಿರುವ ಚಿತ್ರಕ್ಕೆ ಅಂಥ ಟ್ರೈಲರ್‌ ಬೇಕಿತ್ತೇ? ಎಂದು ಕೇಳಿಕೊಂಡವರೇ ಹೆಚ್ಚು. ಹಾಗೆ ಪ್ರಶ್ನಿಸುತ್ತಲೇ ಈ ಚಿತ್ರದ ಟ್ರೈಲರ್‌ ಅನ್ನು ಜನ ನೋಡಿದ್ದೇ ನೋಡಿದ್ದು. ಅಲ್ಲಿಗೆ ಚಿತ್ರತಂಡದ ಉದ್ದೇಶ ಈಡೇರಿತು. ಹುಡುಗಿ, ಕಾಲು- ಬೆರಳುಗಳ ಸಂದು ಎಂಬಿತ್ಯಾದಿ ಸಂಭಾಷಣೆಗಳಿಂದ ತುಂಬಿದ ‘ಶ್ರೀನಿವಾಸ ಕಲ್ಯಾಣ' ಚಿತ್ರದ ಟ್ರೈಲರ್‌ ಯೂಟ್ಯೂಬ್‌ಗೆ ಬಂದಿದೆ. ಟ್ರೈಲರ್‌ ಬಂದ ಕೆಲವೇ ದಿನಗಳಲ್ಲಿ ಅದರ ವೀಕ್ಷಕರ ಸಂಖ್ಯೆ 3.80 ಲಕ್ಷ ದಾಟಿದೆ. ಹಾಗೆ ನೋಡಿದರೆ ಡಬಲ್‌ ಮೀನಿಂಗ್‌ ಡೈಲಾಗ್‌ಗಳಿಂದ ಸೌಂಡು ಮಾಡುತ್ತಿರುವ ಈ ಟ್ರೈಲರ್‌ಗೂ ಮೊದಲೇ ಕೇವಲ ಸಿನಿಮಾ ಕಂಟೆಂಟ್‌ ಒಳಗೊಂಡ ಟೀಸರ್‌ ಬಿಡುಗಡೆ ಮಾಡಿದ್ದರು. ಆದರೆ, ಅದು ಹೆಚ್ಚಿನ ಜನ ತಲುಪಲೇ ಇಲ್ಲ. ಸಿನಿಮಾ ಬಿಡುಗಡೆಯ ಹತ್ತಿರಕ್ಕೆ ಬರುತ್ತಿರುವಾಗ ಯೋಚಿಸಿ ಒಂದು ಡಬಲ್‌ ಮೀನಿಂಗ್‌ ಸಂಭಾಷಣೆಗಳನ್ನು ಒಳಗೊಂಡ ಟ್ರೈಲರ್‌ ಬಿಟ್ಟಿದ್ದೇ ತಡ, ಕನ್ನಡದಲ್ಲಿ ‘ಶ್ರೀನಿವಾಸ ಕಲ್ಯಾಣ' ಎನ್ನುವ ಹೆಸರಿನಲ್ಲೊಂದು ಸಿನಿಮಾ ಬರುತ್ತಿದೆ ಎಂದು ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಇದು ಸದ್ದು ಮಾಡಿತು. ಹೀಗಾಗಿ ಒಳ್ಳೆಯ ಹೆಸರಿನ ಚಿತ್ರಕ್ಕೆ ಡಬಲ್‌ ಮೀನಿಂಗ್‌ ಡೈಲಾಗ್‌ಗಳ ಟ್ರೈಲರ್‌ ಕೇವಲ ಮಾರುಕಟ್ಟೆಯ ತಂತ್ರ ಎಂಬುದನ್ನು ಚಿತ್ರದ ನಿರ್ದೇಶಕ ಕಂ ನಾಯಕ ನಟ ಶ್ರೀನಿ ಹೇಳಿಕೊಳ್ಳುತ್ತಾರೆ.
ಶ್ರೀನಿವಾಸ ಕಲ್ಯಾಣ... ಇಂಥದ್ದೊಂದು ಶೀರ್ಷಿಕೆ ಹೊಂದಿರುವ ಚಿತ್ರಕ್ಕೆ ಅಂಥ ಟ್ರೈಲರ್ ಬೇಕಿತ್ತೇ? ಎಂದು ಕೇಳಿಕೊಂಡವರೇ ಹೆಚ್ಚು. ಹಾಗೆ ಪ್ರಶ್ನಿಸುತ್ತಲೇ ಈ ಚಿತ್ರದ ಟ್ರೈಲರ್ ಅನ್ನು ಜನ ನೋಡಿದ್ದೇ ನೋಡಿದ್ದು. ಅಲ್ಲಿಗೆ ಚಿತ್ರತಂಡದ ಉದ್ದೇಶ ಈಡೇರಿತು. ಹುಡುಗಿ, ಕಾಲು- ಬೆರಳುಗಳ ಸಂದು ಎಂಬಿತ್ಯಾದಿ ಸಂಭಾಷಣೆಗಳಿಂದ ತುಂಬಿದ ‘ಶ್ರೀನಿವಾಸ ಕಲ್ಯಾಣ' ಚಿತ್ರದ ಟ್ರೈಲರ್ ಯೂಟ್ಯೂಬ್ಗೆ ಬಂದಿದೆ. ಟ್ರೈಲರ್ ಬಂದ ಕೆಲವೇ ದಿನಗಳಲ್ಲಿ ಅದರ ವೀಕ್ಷಕರ ಸಂಖ್ಯೆ 3.80 ಲಕ್ಷ ದಾಟಿದೆ. ಹಾಗೆ ನೋಡಿದರೆ ಡಬಲ್ ಮೀನಿಂಗ್ ಡೈಲಾಗ್ಗಳಿಂದ ಸೌಂಡು ಮಾಡುತ್ತಿರುವ ಈ ಟ್ರೈಲರ್ಗೂ ಮೊದಲೇ ಕೇವಲ ಸಿನಿಮಾ ಕಂಟೆಂಟ್ ಒಳಗೊಂಡ ಟೀಸರ್ ಬಿಡುಗಡೆ ಮಾಡಿದ್ದರು. ಆದರೆ, ಅದು ಹೆಚ್ಚಿನ ಜನ ತಲುಪಲೇ ಇಲ್ಲ. ಸಿನಿಮಾ ಬಿಡುಗಡೆಯ ಹತ್ತಿರಕ್ಕೆ ಬರುತ್ತಿರುವಾಗ ಯೋಚಿಸಿ ಒಂದು ಡಬಲ್ ಮೀನಿಂಗ್ ಸಂಭಾಷಣೆಗಳನ್ನು ಒಳಗೊಂಡ ಟ್ರೈಲರ್ ಬಿಟ್ಟಿದ್ದೇ ತಡ, ಕನ್ನಡದಲ್ಲಿ ‘ಶ್ರೀನಿವಾಸ ಕಲ್ಯಾಣ' ಎನ್ನುವ ಹೆಸರಿನಲ್ಲೊಂದು ಸಿನಿಮಾ ಬರುತ್ತಿದೆ ಎಂದು ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಇದು ಸದ್ದು ಮಾಡಿತು. ಹೀಗಾಗಿ ಒಳ್ಳೆಯ ಹೆಸರಿನ ಚಿತ್ರಕ್ಕೆ ಡಬಲ್ ಮೀನಿಂಗ್ ಡೈಲಾಗ್ಗಳ ಟ್ರೈಲರ್ ಕೇವಲ ಮಾರುಕಟ್ಟೆಯ ತಂತ್ರ ಎಂಬುದನ್ನು ಚಿತ್ರದ ನಿರ್ದೇಶಕ ಕಂ ನಾಯಕ ನಟ ಶ್ರೀನಿ ಹೇಳಿಕೊಳ್ಳುತ್ತಾರೆ.
