ಚಿತ್ರರಂಗದಿಂದ ಹಲವು ವರ್ಷಗಳ ಕಾಲ ದೂರ ಉಳಿದ ನಟ ಅನಿರುದ್ಧ್ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿಕೊಳ್ಳುವಂಥ ದಾಖಲೆ ನಿರ್ಮಿಸಿದ್ದಾರೆ.
ಚಿತ್ರರಂಗದಲ್ಲಿ ಮಾತ್ರವಲ್ಲದೆ, ರಂಗಭೂಮಿಯಲ್ಲಿಯೂ ತಮ್ಮನ್ನು ತೊಡಗಿಸಿಜೊಂಡಿರುವ ಅನಿರುದ್ಧ್, ದಾಖಲೆ ಮಾಡಿರುವುದು ಸಾಮಾನ್ಯ ವಿಷಯವಲ್ಲ. ಒಂದೇ ಸಲಕ್ಕೆ 6 ಕಿರುಚಿತ್ರಗಳನ್ನು ಒಟ್ಟಿಗೆ ಬಿಡುಗಡೆಯಾಗಿದ್ದು, ಆರೂ ಸಮಾಜದ ಸಮಸ್ಯೆಗಳನ್ನು ಬಿಂಬಿಸುತ್ತವೆ.
- ಒಂದೇ ದಿನದಲ್ಲಿ 6 ಕಿರುಚಿತ್ರಗಳನ್ನು ಕೀರ್ತಿ ಇನೋವೇಶನ್ಸ್ ಅಡಿಯಲ್ಲಿ ನಿರ್ಮಾಣವಾಗಿವೆ. ಅನಿರುದ್ಧ ಅವರು ನಿರ್ದೇಶಿಸಿರುವ ಈ ಚಿತ್ರಗಳು ಸೆಪ್ಟೆಂಬರ್ 18, 2018ರಂದು ಬಿಡುಗಡೆಯಾಗಿದ್ದವು.
- ಒಂದೇ ದಿನದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ 6 ಚಿತ್ರಗಳು ಬಿಡುಗಡೆಯಾಗಿದ್ದು ಇದೇ ಮೊದಲು.
- ಬಿಡುಗಡೆಯಾದ 6 ಚಿತ್ರಗಳಿಗೆ ಯಾವುದೆ ಸಂಭಾಷಣೆ ಇಲ್ಲದಿದ್ದರೂ, ಜನರನ್ನು ತಲುಪಬೇಕಾದ ಸಂದೇಶ ಸುಲಭವಾಗಿ ತಲುಪುತ್ತದೆ.
- ಬಿಡುಗಡೆಯಾದ 6 ಕಿರುಚಿತ್ರಗಳು ಬೇರಿ ಬೇರೆ ಶೈಲಿಗಳಲ್ಲಿ ಚಿತ್ರೀಕರಣಗೊಂಡಿವೆ.
ಕನ್ನಡಿಗನಾಗಿ ಹಾಗೂ ಕರ್ನಾಟಕ ಚಲನಚಿತ್ರ ಕಲಾವಿದನಾಗಿರೋದಕ್ಕೆ ನನಗೆ ಹೆಮ್ಮ ಇದೆ. ಈ ಎಲ್ಲ ದಾಖಲೆಗಳು ಆಗಿರೋದಕ್ಕೆ ಅಪ್ಪ ಡಾ. ವಿಷ್ಣುವರ್ಧನ್ ಅವರ ಆಶೀರ್ವಾದ, ಕೀರ್ತಿ ಇನೋವೇಶನ್ಸ್ ಬೆಂಬಲ ಹಾಗೂ ನನ್ನ ಕುಟುಂಬದ ಸಹಕಾರ ಹಾಗೂ ನನ್ನ ಮೇಲೆ ಇಟ್ಟಿರುವ ಭರವಸೆ, ತಮ್ಮೆಲ್ಲರ ಹಾರೈಕೆಯೇ ಕಾರಣ. ನನ್ನ ಹೆಸರು 4 ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿವೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅತೀವ ಸಂತೋಷವಾಗುತ್ತದೆ. - ಅನಿರುದ್ಧ್.



