ನಾನೇ ಎಂದು ಬೀಗಬೇಡ; ರಾಮಾಯಣ ಓದಿಕೊಂಡ ಆಚಾರ್ಯರು ತಪ್ಪು ಹೇಳಿದ್ದನ್ನ ಕಂಡಿದ್ದೇವೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 29, Aug 2018, 2:09 PM IST
Sameer Acharya troll in social media
Highlights

ನಾನೇ ಎಂದು ಬೀಗಬೇಡ ಸೋತವರನ್ನು ಕಂಡಿದ್ದೇವೆ ! ಬಹುಶಃ ಈ ಮಾತು ಈ ಸಂದರ್ಭದಲ್ಲಿ ಸಮೀರ್ ಆಚಾರ್ಯರಿಗೆ ಒಪ್ಪುತ್ತದೆ. ಕನ್ನಡದ ಕೋಟ್ಯಧಿಪತಿ ಸ್ಪರ್ಧೆಯಲ್ಲಿ ಸಮೀರ್ ಆಚಾರ್ಯ ಭಾಗವಹಿಸಿದ್ದರು. ಇದರಲ್ಲಿ ಆಚಾರ್ಯರು ಹೆಂಡತಿಯೊಂದಿಗೆ ವರ್ತಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ. 

ಬೆಂಗಳೂರು (ಆ. 29): ನಾನೇ ಎಂದು ಬೀಗಬೇಡ ಸೋತವರನ್ನು ಕಂಡಿದ್ದೇವೆ ! ಬಹುಶಃ ಈ ಮಾತು ಈ ಸಂದರ್ಭದಲ್ಲಿ ಸಮೀರ್ ಆಚಾರ್ಯರಿಗೆ ಒಪ್ಪುತ್ತದೆ. ಕನ್ನಡದ ಕೋಟ್ಯಧಿಪತಿ ಸ್ಪರ್ಧೆಯಲ್ಲಿ ಸಮೀರ್ ಆಚಾರ್ಯ ಭಾಗವಹಿಸಿದ್ದರು. ಇದರಲ್ಲಿ ನಿರೂಪಕ ರಮೇಶ್ ಅರವಿಂದ್  ರಾಮಾಯಣದ ಬಗ್ಗೆ ಒಂದು ಪ್ರಶ್ನೆ ಕೇಳುತ್ತಾರೆ. ರಾಮಾಯಣದ ಪ್ರಕಾರ ಶೂರ್ಪನಖಿ ತಾಯಿ ಯಾರು? ಎನ್ನುವ ಪ್ರಶ್ನೆಗೆ ಸಮೀರ್ ಆಚಾರ್ಯ ದಿತಿ ಎನ್ನುತ್ತಾರೆ.

ಎರಡೆರಡು ಬಾರಿ  ಕೇಳಿದ ನಂತರ ಆ ಉತ್ತರವನ್ನು ರಮೇಶ್ ಅರವಿಂದ್ ಲಾಕ್ ಮಾಡುತ್ತಾರೆ. ಆಗ ಸಮೀರ್ ಪತ್ನಿ ಬಳಿ ಉತ್ತರ ಕೇಳಿದಾಗ ಅವರು ಕೈಕೇಸಿ ಎನ್ನುತ್ತಾರೆ. ಕೋಪಗೊಂಡ ಆಚಾರ್ಯರು ನಾನು ರಾಮಾಯಣ ಓದಿದೀನಾ? ನೀನು ಓದಿದೀಯಾ ಎಂದು ಗದರುತ್ತಾರೆ. ಕೊನೆಗೆ ಅವರ ಪತ್ನಿಯ ಉತ್ತರವೇ ಸರಿಯಾಗಿರುತ್ತದೆ. 

ಸಮೀರ್ ಆಚಾರ್ಯರ ಈ ನಡವಳಿಕೆ ಸಾರ್ವಜನಿಕ ಟೀಕೆಗೆ ಗ್ರಾಸವಗಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ. ಕನ್ನಡದ ಕೋಟ್ಯಾಧಿಪತಿಯ ವಿಡಿಯೋ ತುಣುಕು ಇಲ್ಲಿದೆ ನೋಡಿ

 

 

 

 

loader