ಸಮಂತಾ ಹಾಗೂ ನಾಗ ಚೈತನ್ಯ ನೋಡಿದ್ರೆ ವಾಹ್..! ಎಷ್ಟು ಚಂದಾ ಈ ಜೋಡಿ ಎಂದು ಹೇಳುವವರೇ ಹೆಚ್ಚು. ಅದರಲ್ಲೂ ಅವರಿಬ್ಬರ ಇನ್‌ಸ್ಟಾಗ್ರಾಂ ಪೋಸ್ಟ್‌ ಹಾಗೂ ಸಿನಿಮಾ ಸಂದರ್ಶನ ವೇಳೆ ನಡೆದುಕೊಳ್ಳುವ ರೀತಿ ಎಲ್ಲರಿಗೂ ಕಪಲ್‌ ಗೋಲ್‌ ಕೊಡುವುದಂತೂ ಗ್ಯಾರಂಟಿ.

ಎರಡು ದಿನದಲ್ಲಿ 21 ಕೋಟಿ ಗಳಿಸಿದ ಸಿನಿಮಾ ಈಗ ಅಮೆಜಾನ್ ಪ್ರೈಂನಲ್ಲಿ?

ಕೆಲದಿನಗಳಿಂದ ಸಮಂತಾ ಗರ್ಭಿಣಿಯಾಗಿದ್ದಾರೆ ಎಂದು ಹರಿದಾಡುತ್ತಿರುವ ವದಂತಿಗೆ ಟ್ಟಿಟ್ಟರ್ ಖಾತೆಯಲ್ಲಿ ಕೊಟ್ಟ ಉತ್ತರ ಅಭಿಮಾನಿಗಳನ್ನು ಬ್ಲಾಂಕ್ ಮಾಡಿದೆ.

 

''ಹೌದಾ....ನಿಜವಾಗ್ಲೂ? ನಿಮಗೆ ಗೊತ್ತಾದ ತಕ್ಷಣ ನನಗೆ ತಿಳಿಸಿ' ಎಂದು ಬರೆದುಕೊಂಡಿದ್ದಾರೆ.

ಸಮಂತಾ ಔಟ್‌ಫಿಟ್ ಹಿಂದಿರುವ ಸೀಕ್ರೆಟ್ ಇದಾ?

'Oh baby' ಚಿತ್ರದ ಸುದ್ದಿಗೊಷ್ಟಿಯಲ್ಲಿ ವರದಿಗಾರನೊಬ್ಬ ಗರ್ಭಿಣಿ ವಿಚಾರದ ಬಗ್ಗೆ ಕೇಳಿದ್ದಕ್ಕೆ 'ನಾನು ಹಾಗೂ ಚೈತನ್ಯ ಪೋಷಕರಾಗುವುದಕ್ಕೆ ದಿನಾಂಕ ನಿಗದಿ ಮಾಡಿಕೊಂಡಿದ್ದೇವೆ. ನಮಗೆ ಯಾವಾಗ ಸೂಕ್ತ ಸಮಯ ಎಂದು ಅನಿಸುತ್ತದೆಯೋ ಆಗ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾವು ಖಂಡಿತವಾಗಿಯೂ ಅಭಿಮಾನಿಗಳಿಗೆ ತಿಳಿಸುತ್ತೇವೆ' ಎಂದು ಹೇಳಿದರು.