ಮದುವೆ ನಂತರ ತೆರೆ ಮೇಲೆ ಯಾವಾಗಪ್ಪಾ ಈ ಕ್ಯೂಟ್ ಜೋಡಿನಾ ನೋಡಬಹುದು ಎಂದು ಕಾಯುತ್ತಿದ್ದವರಿಗೆ 'ಮಜಿಲ' ಕೊಟ್ಟಿತ್ತು ಉತ್ತರ.

ಸಮಂತ್ ಕೈ ಹಿಡಿದ ಸಿನಿಮಾಗಳೆಲ್ಲಾ ಸಕ್ಸಸ್ ಕಾಣುವುದಂತೂ ಗ್ಯಾರಂಟಿ. ಅದರಲ್ಲೂ ಹಲವು ವರ್ಷಗಳಿಂದ ಫ್ಲಾಪ್ ಸಿನಿಮಾ ಮಾಡುತ್ತ ಬರುತ್ತಿದ್ದ ನಾಗಚೈತನ್ಯರಿಗೆ ಇದು ಬಿಗ್ ಹಿಟ್ ನೀಡಿತ್ತು. ಮಜಿಲ ಚಿತ್ರ ರಿಲೀಸ್ ಆಗಿ ಎರಡೇ ದಿನದಲ್ಲಿ 21 ಕೋಟಿ ಕಲೆಕ್ಷನ್ ಮಾಡಿದ ಕಾರಣ ದಿಜಿಟಲ್ ಹಕ್ಕು ಪಡೆಯುವುದಕ್ಕೆ ಬಹಳ ಬೇಡಿಕೆ ಇತ್ತು. ಆದರೆ ಚಿತ್ರತಂಡ ಮಜಿಲ ಚಿತ್ರದ ಡಿಜಿಟಲ್ ಹಕ್ಕನ್ನು ಅಮೇಜಾನ್‌ಗೆ ನೀಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.

ಅಮೆಜಾನ್ ಪ್ರೈಂ ಈ ಚಿತ್ರದ ಡಿಜಿಟಲ್ ಹಕ್ಕನ್ನು ಖರೀದಿ ಮಾಡಿರುವುದಾಗಿ ತಿಳಿದು ಬಂದಿದೆ. ಸೂಪರ್ ಹಿಟ್ ಕಾಣುತ್ತಿರುವ ಸಿನಿಮಾ ಈಗಲೇ ಡಿಜಿಟಲ್‌ನಲ್ಲಿ ಪ್ರಸಾರವಾದರೆ ತಂಡಕ್ಕೆ ನಷ್ಟ ಕಾಣುವುದಂತೂ ಗ್ಯಾರಂಟಿ. ಈ ಕಾರಣದಿಂದ ಟಾಲಿವುಡ್ ನಿರ್ಮಾಪಕರ ಸಂಘ ತೀರ್ಮಾನ ಮಾಡಿ ಈ ಸಿನಿಮಾವನ್ನು 20 ದಿನಗಳಾದ ನಂತರ ಬಿಡುಗಡೆ ಮಾಡಬೇಕೆಂದು ನಿರ್ಧಾರ ಹೊರಡಿಸಿದೆ.

ಟಾಲಿವುಡ್ ಬ್ಯೂಟಿ ಸಮಂತಾ ಬಗ್ಗೆ ತಿಳಿಯದ ವಿಷಯಗಳು...

ಸದ್ಯಕ್ಕೆ ಚಿತ್ರತಂಡದಿಂದ ಕೇಳಿ ಬರುವ ಮಾತಿನ ಪ್ರಕಾರ ಸಿನಿಮಾ ಜೂನ್ 4 ರಂದು ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ.