ಸಮಂತಾ - ನಾಗಚೈತನ್ಯ ರೊಮ್ಯಾನ್ಸ್ ಲೀಕ್  | ಪತಿಗೆ ಖುಲ್ಲಂಖುಲ್ಲಾಗಿ ಮುತ್ತು ಕೊಟ್ಟ ಸಮಂತಾ | ನವಜೋಡಿಯ ಸಖತ್ ರೊಮ್ಯಾನ್ಸ್ | ಈ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ ಸಮಂತಾ ಅಕ್ಕಿನೇನಿ 

ಬೆಂಗಳೂರು (ಸೆ. 26): ಸಮಂತಾ ಅಕ್ಕಿನೇನಿ ಇನ್‌ಸ್ಟಾಗ್ರಾಂ ಪೋಸ್ಟ್ ನೋಡದವರು ಒಮ್ಮೆ ಅವರ ಅಕೌಂಟ್‌ಗೆ ಕಣ್ಣು ಹಾಯಿಸಿ. ಚೆಂದದೊಂದು ಫೋಟೋ ಮೊದಲಿಗೇ ಕಾಣಿಸಿಕೊಳ್ಳುತ್ತದೆ. ಅದು ತುಂಬಾ ಪ್ರೀತಿಯಿಂದ ಸಮಂತಾ ತನ್ನ ಗಂಡ ನಾಗಚೈತನ್ಯಗೆ ಕೊಟ್ಟ ಸಿಹಿ ಮುತ್ತಿನ ಫೋಟೋ.

ಅರರೇ ಹೆಂಡತಿ ಗಂಡನಿಗೆ ಮುತ್ತು ಕೊಟ್ಟರೆ ಅದರಲ್ಲೇನು? ಎನ್ನುವಿರಾ, ಅಲ್ಲೇ ಇರುವುದು ಇಂಟರೆಸ್ಟಿಂಗ್ ಮ್ಯಾಟರ್. ನಾಗಾರ್ಜುನ ಫ್ಯಾಮಿಲಿ ಪೂರಾ ಸ್ಪೇನ್ ಪ್ರವಾಸದಲ್ಲಿ ಇರುವಾಗ ಸಂಗೀತ ಕಾರ್ಯಕ್ರಮದಲ್ಲಿ ಪ್ರೀತಿ ಹೆಚ್ಚಾಗಿ ಸಮಂತಾ ನಾಗಚೈತನ್ಯಗೆ ಮುತ್ತು ಕೊಟ್ಟು ನೆರೆದಿದ್ದ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ.

View post on Instagram

ಒಂದು ವರ್ಷದ ಹಿಂದಷ್ಟೇ ಜೊತೆಯಾಗಿದ್ದ ಈ ಜೋಡಿ ಪ್ರೇಮಲೋಕದಲ್ಲಿ ತೇಲಾಡುತ್ತಿರುವ ಈ ಕ್ಷಣಗಳೆಲ್ಲವನ್ನೂ ಸಮಂತಾ ಮೊದಲಿಂದ ಶೇರ್ ಮಾಡಿಕೊಂಡಿದ್ದು ಕಡಿಮೆಯೇ. ಆದರೆ ಈಗ ಏನನ್ನಿಸಿತೋ ತಾನು ತನ್ನ ಗಂಡನಿಗೆ ಕೊಟ್ಟ ಮುತ್ತಿನ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವುದರ ಮೂಲಕ ಮಧುರವಾದ ಸುದ್ದಿಯಲ್ಲಿದ್ದಾರೆ ಸಮಂತಾ ಅಕ್ಕಿನೇನಿ.