Asianet Suvarna News Asianet Suvarna News

ಪ್ರೀತಿ ಕಳೆದುಕೊಂಡ್ರಂತೆ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಈಗ ಶೋಕದಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಪ್ರೀತಿ ಸತ್ತಿರುವುದು.

Salman Khan pet dog "My Love" passes away
Author
Bengaluru, First Published Oct 20, 2018, 11:55 AM IST
  • Facebook
  • Twitter
  • Whatsapp

ಪ್ರೀತಿ ಸತ್ತಾಗ ನೋವು ಆಗದೇ ಇರುತ್ತದೆಯೇ? ಕಣ್ಣೀರು ಬರದೇ ಇರುತ್ತದೆಯೇ? ಹೌದು ಹೀಗೊಂದು ಶೋಕ ಸಲ್ಮಾನ್‌ರನ್ನು ಆವರಿಸಲು ಕಾರಣ ಅವರು ಅತಿಯಾಗಿ ಪ್ರೀತಿ ಮಾಡುತ್ತಿದ್ದ ನಾಯಿ ತೀರಿಕೊಂಡಿರುವುದು.

ಸಲ್ಮಾನ್‌ಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ ಪ್ರೀತಿ. ಅದಕ್ಕಾಗಿಯೇ ಪ್ರಾಣಿಗೊಂದಿಗೆ ಹೆಚ್ಚು ಬೆರೆಯುತ್ತಿದ್ದರು ಕೂಡ. ಈ ಪ್ರೀತಿಯ ನಾಯಿ ತೀರಿಕೊಂಡಿರುವುದು ಹೆಚ್ಚು ನೋವು ತಂದಿದೆ. ಅದಕ್ಕಾಗಿಯೇ ‘ಇಂದು ನನ್ನ ಪ್ರೀತಿ ನನ್ನನ್ನು ಬಿಟ್ಟು ದೂರ ಹೋಗಿದೆ. ಅದರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪ್ರಾರ್ಥಿಸಿ ಕಣ್ಣೀರಿಟ್ಟಿದ್ದಾರೆ ಸಲ್ಮಾನ್. ಇನ್ನು ಈ ನಾಯಿ ಮತ್ತು ಸಲ್ಮಾನ್ ನಡುವಿನ ಬಾಂಧವ್ಯ ಹೇಗಿತ್ತು ಎಂದರೆ, ಸಲ್ಮಾನ್ ಕೈಯಲ್ಲಿ ಒಂದು ಚೈನ್ ಇತ್ತು. ಅದೇ ರೀತಿಯ ಚೈನ್ ಆ ನಾಯಿಕ ಕೊರಳಿನಲ್ಲೂ ಇತ್ತು. ಇದಕ್ಕೆ ಕಾರಣ ನನ್ನ ಚೈನ್ ನೋಡಿದಾಗ ನನ್ನ ಪ್ರೀತಿಯ ನಾಯಿ ನೆನಪಾಗಬೇಕು ಎಂದು ಸಲ್ಮಾನ್ ಈ ರೀತಿ ಮಾಡಿದ್ದರಂತೆ. ಈ ಅವರು ಪ್ರೀತಿಯ ಜೀವವನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ.

Follow Us:
Download App:
  • android
  • ios