ಮಾಜಿ ಮಿಸ್ ಇಂಡಿಯಾ ಮೇಲೆ ಸಲ್ಲುಗೆ ಸಿಕ್ಕಾಪಟ್ಟೆ ಲವ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Jul 2018, 2:19 PM IST
Salman Khan loved Juhi Chawla and her father rejected his proposal
Highlights

ಸಲ್ಮಾನ್ ಖಾನ್ 50 ರ ಪ್ರಾಯ ದಾಟಿದರೂ ಇನ್ನೂ ಕಂಕಣ ಭಾಗ್ಯ ಕೂಡಿ ಬಂದಿಲ್ಲ. ಇವರು ಒಂದು ಕಾಲದಲ್ಲಿ ಮಾಜಿ ಮಿಸ್ ಇಂಡಿಯಾಗೆ ಪ್ರಪೋಸ್ ಮಾಡಿದ್ದರು. ಆದರೆ ಅವರ ತಂದೆ ಇದಕ್ಕೆ ಸುತರಾಂ ಒಪ್ಪಿಲ್ಲ. ಒಂದು ವೇಳೆ ಒಪ್ಪಿದ್ರೆ ಇಷ್ಟೊತ್ತಿಗೆ ಸಲ್ಲು  ಗೃಹಸ್ತಾಶ್ರಮ ಸೇರಿರುತ್ತಿದ್ದರು. 

ಮುಂಬೈ  (ಜು. 24): ಒಂದು ವೇಳೆ ಸಲ್ಮಾನ್ ಖಾನ್ ಕನಸು ನನಸಾಗಿದ್ದರೆ, ಅವರ ಆಸೆಗೆ ಮಾಜಿ ಮಿಸ್ ಇಂಡಿಯಾ ಜೂಹಿ ಚಾವ್ಲಾ ತಂದೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರೆ ಇಷ್ಟೊತ್ತಿಗೆ ಸಲ್ಮಾನ್ ಬ್ರಹ್ಮಚರ್ಯ ತೊರೆದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಾಗಿರುತ್ತಿತ್ತು. ಇದರ ಹಿಂದೆ ಒಂದು ಕತೆ ಇದೆ.

ಆಗ ಸಲ್ಮಾನ್ ಖಾನ್ ವಯಸ್ಸು 24 ರ ಆಸುಪಾಸು ಅನ್ನಿಸುತ್ತದೆ. ಆಗಲೇ ಸೀದಾ ಜೂಹಿ ಚಾವ್ಲಾ ತಂದೆಯ ಬಳಿ ಹೋಗಿ, ‘ನಿಮ್ಮ ಮಗಳು ತುಂಬಾ ಸ್ವೀಟಿಯಾಗಿದ್ದಾಳೆ. ಅವಳನ್ನು ನನಗೆ ಮದುವೆ ಮಾಡಿಕೊಡುತ್ತೀರಾ’ ಎಂದು ನೇರವಾಗಿ ಕೇಳಿದ್ದರಂತೆ ಸಲ್ಮಾನ್. ಇದಕ್ಕೆ ಅಷ್ಟೇ ನೇರವಾಗಿ ಜೂಹಿ ತಂದೆ ‘ನೋ’ ಎಂದಿದ್ದರಂತೆ.

ಇದು ಕಟ್ಟುಕತೆಯಲ್ಲ, ಸ್ವತಃ ಸಲ್ಮಾನ್ ಖಾನ್ ತುಂಬಾ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು. ಈಗ ಆ ವಿಡಿಯೋ ಎಲ್ಲಾ ಕಡೆ ಫುಲ್ ವೈರಲ್ ಆಗಿರುವುದರಿಂದ ಮತ್ತೆ ಸಲ್ಮಾನ್ ಮದುವೆ ಸುದ್ದಿ ಮುನ್ನೆಲೆಗೆ ಬಂದಿದೆ ಅಷ್ಟೆ. ಹಾಗೊಂದು ವೇಳೆ ಮಿಸ್ ಇಂಡಿಯಾ ಜೂಹಿ ತಂದೆ ಅಂದು ಸಲ್ಮಾನ್ ಖಾನ್‌ನನ್ನು ತಮ್ಮ ಅಳಿಯನಾಗಿ ಒಪ್ಪಿಕೊಂಡಿದ್ದರೆ ಇಂದು ೫೨ ವರ್ಷದ ಯುವಕ ಸಲ್ಮಾನ್ ಅಭಿಮಾನಿಗಳು ಸಲ್ಲು ಮದುವೆ ಯಾವಾಗ ಎಂದು ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೇ ಬರುತ್ತಿರಲಿಲ್ಲ. 

loader