ರಜಿನಿ ಕಾಂತ್ ಅವರನ್ನು ನೋಡುವ ಸಲುವಾಗಿಯೇ ಕಾರ್ಯಕ್ರಮಕ್ಕೆ ಕ್ಕೆ ಆಗಮಿಸಿರುವುದಾಗಿ ಮಾತು ಆರಂಭಿಸಿದ ಸಲ್ಲು, ಅಕ್ಷಯ್ ಕುಮಾರ್ ನಟನೆಯ ಬಗ್ಗೆ ಮಚ್ಚುಗೆ ಮಾತುಗಳನ್ನಾಡಿದ್ದಾರೆ.

ಮುಂಬೈ(ನ.21): ರೋಬೋ-2.0 ಚಿತ್ರದ ಅದ್ಧೂರಿ ಟೀಜರ್ ಲಾಂಚ್ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದಿದ್ದರೂ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಆಗಮಿಸಿ, ಚಿತ್ರಕ್ಕೆ ಶುಭಕೋರಿದ್ದಾರೆ. 

ಯಶ್ ರಾಜ್ ಸ್ಟುಡಿಯೋದಲ್ಲಿ ಅತ್ಯಾಧುನಿಕ ಬೃಹತ್ ವೇದಿಕೆಯಲ್ಲಿ ಕಾಣಿಸಿಕೊಂಡ ಸಲ್ಮಾನ್ ಖಾನ್, ರಜಿನಿ ಕಾಂತ್ ಅವರನ್ನು ನೋಡುವ ಸಲುವಾಗಿಯೇ ಕಾರ್ಯಕ್ರಮಕ್ಕೆ ಆಗಮಿಸಿರುವುದಾಗಿ ಮಾತು ಆರಂಭಿಸಿ, ಅಕ್ಷಯ್ ಕುಮಾರ್ ನಟನೆಯ ಬಗ್ಗೆ ಮಚ್ಚುಗೆ ಮಾತುಗಳನ್ನಾಡಿದರು.

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಜಿನಿಕಾಂತ್, ಬಾಲಿವುಡ್ ನಲ್ಲಿ ಶಾರುಕ್ ಮತ್ತು ಅಕ್ಷಯ್ ಜೊತೆ ತೆರೆ ಹಂಚಿಕೊಂಡಿದ್ದು, ಸಲ್ಮಾನ್ ಜೊತೆಯಾಗಿ ಕಾಣಿಸಿಕೊಳ್ಳುವುದು ಎಂದು ಎಂಬ ಪ್ರಶ್ನೆಗೆ 'ಸಲ್ಮಾನ್ ಎಸ್ ಎಂದರೆ ನಾಳೆ ಅವರೊಂದಿಗೆ ಕಾಣಿಸಿಕೊಳ್ಳಲು ಸಿದ್ಧ' ಎಂದಿದ್ದಾರೆ.